ಕೆಣಕಿತು ನನ್ನನ್ನು... ಶ್ರೇಯಸ್​ ಅಯ್ಯರ್​​ ಅಬ್ಬರದ ಬ್ಯಾಟಿಂಗ್​ ಹಿಂದಿದೆ ಚುಚ್ಚು ಮಾತುಗಳ ಸೇಡು | Shreyas Iyer

ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶ್ರೇಯಸ್​ ಅಯ್ಯರ್​
ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶ್ರೇಯಸ್​ ಅಯ್ಯರ್​
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಸತತ ಗೆಲುವು ನೋಡುತ್ತಿರುವ ಪಂಜಾಬ್​ ಕಿಂಗ್ಸ್
  • ಪಂಜಾಬ್​ ಕಿಂಗ್ಸ್​ ನಾಯಕನಿಂದ ಉತ್ತಮ ಕ್ಯಾಪ್ಟನ್ಸಿ, ಬ್ಯಾಟಿಂಗ್ ಆರ್ಭಟ
Shreyas Iyer: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಶ್ರೇಯಸ್​ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್​, ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, ಒಂದರಲ್ಲಿ ಮಳೆಯಿಂದ ಒಂದಂಕಿಯನ್ನು ಪಡೆಯಿತು. ಈ ಮೂಲಕ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಉಳಿದ 9 ತಂಡಗಳಿಗೆ ದೊಡ್ಡ ಸವಾಲು ನೀಡಿದ್ದು, ಅಯ್ಯರ್​ ಪಡೆಯನ್ನು ಮಣಿಸುವುದೇ ಕಷ್ಟಸಾಧ್ಯ ಎನ್ನುವಂತಾಗಿದೆ.
ತಮ್ಮ ತಂಡದ ನಾಯಕತ್ವದ ಜವಾಬ್ದಾರಿಯನ್ನು ಅದ್ಭುತವಾಗಿ ಹೊತ್ತಿರುವ ಶ್ರೇಯಸ್​, ಮಧ್ಯಮ ಕ್ರಮಾಂಕದಲ್ಲಿ ಬಂದು ಬ್ಯಾಟ್​ ಮಾಡಿದರೂ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿರುವುದು ಗಮನಾರ್ಹ. ಕ್ಯಾಪ್ಟನ್ಸಿ ಜೊತೆ ಜೊತೆಗೆ ಒಬ್ಬ ಬ್ಯಾಟರ್​ ಆಗಿ ತಂಡಕ್ಕೆ ಹೆಚ್ಚುವರಿ ರನ್​ಗಳ ಕೊಡುಗೆ ನೀಡುತ್ತಿರುವ ಅಯ್ಯರ್​, ಫಿನಿಶರ್​ ಆಗಿ ಪಂಜಾಬ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ದಿಗ್ಗಜ ಕ್ರಿಕೆಟಿಗರ ಹುಬ್ಬೇರಿಸಿದೆ. ಏಕದಿನ ಕ್ರಿಕೆಟ್​ನಲ್ಲಿಯೂ ಅವರ ಬ್ಯಾಟಿಂಗ್​ ಪ್ರದರ್ಶನ ಸ್ಫೋಟಕವಾಗಿ ಕಂಡುಬಂದಿದೆ.
ಬೌನ್ಸರ್​ಗಳು, ಶಾರ್ಟ್​ ಬಾಲ್​ ವಿರುದ್ಧ ಆಡಲು ಹೆಣಗಾಡುತ್ತಾರೆ ಶ್ರೇಯಸ್​ ಎಂಬ ಹಣೆಪಟ್ಟಿಯನ್ನು ಇದೀಗ ಚೂರು ಮಾಡಿರುವ ಅಯ್ಯರ್​, ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್​​ನಲ್ಲಿ ದೊಡ್ಡ ಸಿಕ್ಸರ್​ ಬಾರಿಸಿದರು. ವಿಶ್ವದ ಬೆಸ್ಟ್​ ವೇಗಿಯ ಬೌಲಿಂಗ್​​ಗೆ ಹೊಡೆಯುವ ಮೂಲಕ ತಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದವರ ಬಾಯಿ ಮುಚ್ಚಿಸಿದರು. ಇತ್ತೀಚೆಗಷ್ಟೇ ಜಿಯೋಸ್ಟಾರ್​ ಬಿಲೀವ್​ನಲ್ಲಿ ಮಾತನಾಡಿದ ಶ್ರೇಯಸ್​, ಹಲವು ವಿಷಯಗಳನ್ನು ಹಂಚಿಕೊಂಡರು.
ಈ ಪರಿಸ್ಥಿತಿಯಲ್ಲಿ ನೀವದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಜನರು ನನ್ನ ಸುತ್ತಲಿದ್ದಾರೆ. ಇಂತಹ ಮಾತುಗಳನ್ನು ಕೇಳುವುದು ನನ್ನಿಂದ ಅಸಾಧ್ಯ. ಅದರಲ್ಲೂ ಒಬ್ಬ ಕ್ರಿಕೆಟಿಗನಾಗಿ ಸಾಧ್ಯವೇ ಇಲ್ಲ. ನನ್ನ ಮನಸ್ಸಿನಲ್ಲಿ, ಅವರಾಡಿದ ತಪ್ಪು ಎಂದು ಸಾಬೀತುಪಡಿಸಬೇಕು ಎಂದು ನಿರ್ಧರಿಸಿದೆ. ಇದೇ ಬೆನ್ನುನೋವಿನಿಂದ ನಾನು ಹೊರಗುಳಿದಾಗ, ಕೆಲವು ಅಯ್ಯರ್​ ಮತ್ತೆ ಮೊದಲಿನಂತೆ ಆಡೋದಿಲ್ಲ. ಅವನಿಗೆ ಶಾರ್ಟ್​ ಬಾಲ್​ ವೀಕ್ನೆಸ್​ ಇದೆ ಎಂದು ಲಘುವಾಗಿ ಮಾತನಾಡಿದರು. ಅದನ್ನೆಲ್ಲ ಕೇಳಿದ ಬಳಿಕ, ನಾನು ಇನ್ನಷ್ಟು ಗಟ್ಟಿಯಾಗಿ, ಏಕೆ ನನ್ನಿಂದ ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದೇ ಇಂದು ಇಷ್ಟರ ಮಟ್ಟಿಗೆ ಆಡಲು ಸಾಧ್ಯ ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net