ಎಡಗೈ ಬೆರಳಿನ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಇನ್ನೂ ಫಿಟ್ ಆಗದ ಇಂಗ್ಲೆಂಡ್‌ನ ಬ್ಯಾಟರ್ ಫಿಲ್ ಸಾಲ್ಟ್ ಗುಜರಾತ್ ವಿರುದ್ಧ ಕಣಕ್ಕಿಳಿಯುವುದು ಅನಿಶ್ಚಿತತೆ ಕೂಡಿದೆ. ಕೊನೇ ಲೀಗ್ ಪಂದ್ಯಕ್ಕೆ ಮುನ್ನ ತಂಡ ಕೂಡಿಕೊಂಡಿರುವ ಸಾಲ್ಟ್‌ರನ್ನು ಕಣಕ್ಕಿಳಿಸಲು ಆತುರ ತೋರದ ಆರ್‌ಸಿಬಿ ಫ್ರಾಂಚೈಸಿ ಎಚ್ಚರಿಕೆ ನಡೆ ಅನುಸರಿಸಿದೆ. ಸೋಮವಾರವೂ ತಂಡದ ಅಭ್ಯಾಸಕ್ಕೆ ಸಾಲ್ಟ್ ಗೈರಾಗಿದ್ದರು. ಆಡುವ ಹನ್ನೊಂದರ ಬಳಗವನ್ನು ಇನ್ನೂ ನಿರ್ಧರಿಸಿಲ್ಲ ಎಂದಿರುವ ನಾಯಕ ರಜತ್ ಪಾಟೀದಾರ್, ಫಿಲ್ಸಾಲ್ಟ್ ಲಭ್ಯತೆ ಬಗ್ಗೆ ಟಾಸ್ಗೆ ಮುನ್ನ ನಿರ್ಧರಿಸಲಾಗುವುದು ಎಂದಿದ್ದಾರೆ. ಜೇಕಬ್ ಬೆಥೆಲ್ ಸಹ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ಜೇಕಬ್ ಡಫಿ ವಿದೇಶಿ ಕೋಟಾದಲ್ಲಿ ಅವಕಾಶ ಪಡೆಬಹುದು. ಧರ್ಮಶಾಲಾದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗದ ಕಾರಣ, ಸ್ಪಿನ್ನರ್ ಸುಯಶ್ ಶರ್ಮ ಜಾಗ ಬಿಟ್ಟುಕೊಡಬಹುದು. ಕೊಹ್ಲಿ-ವೆಂಕಟೇಶ್ ಅಯ್ಯರ್ ಮತ್ತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.