ನನ್ನ ತಾಯಿ ಹೇಳಿದ್ರು... ಮೊಹ್ಸಿನ್​ ನಖ್ವಿ ಕೊಟ್ಟ ಬಿಗ್​ ಆಫರ್​ನ ಎಡಗಾಲಿನಲ್ಲಿ ಒದ್ದ ಶೋಯೆಬ್​ ಅಖ್ತರ್ | ​​Shoaib Akhtar

ಈ ಅವಕಾಶವನ್ನು ಇದೀಗ ಶೋಯೆಬ್​ ತಿರಸ್ಕರಿಸಿದ್ದಾರೆ ಎಂದು ಪಾಕ್​ ಮೂಲದ ಕ್ರಿಕೆಟ್​ ವರದಿಗಳು ತಿಳಿಸಿವೆ. ಈ ವಿಷಯಗಳು ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಸ್ವತಃ ಅಖ್ತರ್​ ಸ್ಪಷ್ಟನೆ ನೀಡಿದ್ದಾರೆ.
​​ Shoaib Akhtar
ನನ್ನ ತಾಯಿ ಹೇಳಿದ್ರು... ಮೊಹ್ಸಿನ್​ ನಖ್ವಿ ಕೊಟ್ಟ ಬಿಗ್​ ಆಫರ್​ನ ಎಡಗಾಲಿನಲ್ಲಿ ಒದ್ದ ಶೋಯೆಬ್​ ಅಖ್ತರ್ | ​​ Shoaib Akhtar
Published on: 

Shoaib Akhtar: ಪಾಕಿಸ್ತಾನ ಕ್ರಿಕೆಟ್​ನಲ್ಲಿ ಯಾವುದೂ ಸರಿಯಲ್ಲ ಎನ್ನಲು ಇತ್ತೀಚಿನ ಬೆಳವಣಿಗೆಗಳೇ ಜ್ವಲಂತ ಸಾಕ್ಷಿ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್​ನಲ್ಲಿ, ಟೀಮ್ ಇಂಡಿಯಾ ವಿರುದ್ಧ ಚಿನ್ನದ ಪದಕ ಗೆಲ್ಲಲು ಮುಗ್ಗರಿಸಿದ್ದು ಸದ್ಯ ಭಾರಿ ಟೀಕೆ, ಮುಖಭಂಗಕ್ಕೆ ಗುರಿಯಾಗಿದೆ. ಈ ಮಧ್ಯೆ, ತಮ್ಮದೇ ಕ್ರಿಕೆಟ್​ ಮಂಡಳಿಯಿಂದ ಬಂದ ಬಿಗ್ ಆಫರ್​ ಎಂಬ ವದಂತಿಯನ್ನು ತಳ್ಳಿಹಾಕಿದ ಮಾಜಿ ಹಿರಿಯ ಕ್ರಿಕೆಟಿಗ ಶೋಯೆಬ್​ ಅಖ್ತರ್, ಅಕಸ್ಮಾತ್ ಸಿಕ್ಕರೂ ಅದನ್ನು ರಿಜೆಕ್ಟ್ ಮಾಡುವುದಾಗಿ ಹೇಳಿದ್ದಾರೆ.

ಏಷ್ಯನ್​ ಗೇಮ್ಸ್​ನಲ್ಲಿ ಸಿಗಲಿಲ್ಲ ಚಿನ್ನ

ಪುರುಷ, ಮಹಿಳಾ ತಂಡಗಳು ಉತ್ತಮ ಪ್ರದರ್ಶನ ನೀಡಿ, ಗೆಲುವು ಸಾಧಿಸುವಲ್ಲಿ ಸಂಪೂರ್ಣವಾಗಿ ಎಡವುತ್ತಿದ್ದು, ಮಂಡಳಿಯು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೊಸ ಮುಖ್ಯ ಆಯ್ಕೆಗಾರರನ್ನಾಗಿ ಶೋಯೆಬ್​ ಅಖ್ತರ್​ರನ್ನು​ ನೇಮಕ ಮಾಡಿಕೊಳ್ಳಲು ಆಫರ್​ ನೀಡಿತು. ಆದರೆ, ಈ ಅವಕಾಶವನ್ನು ಇದೀಗ ಶೋಯೆಬ್​ ತಿರಸ್ಕರಿಸಿದ್ದಾರೆ ಎಂದು ಪಾಕ್​ ಮೂಲದ ಕ್ರಿಕೆಟ್​ ವರದಿಗಳು ತಿಳಿಸಿವೆ. ಈ ವಿಷಯಗಳು ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಸ್ವತಃ ಅಖ್ತರ್​ ಸ್ಪಷ್ಟನೆ ನೀಡಿದ್ದಾರೆ.

ಪಾಕ್​ ತಂಡಗಳಿಂದ ಕಳಪೆ ಪ್ರದರ್ಶನ

"ಇದರಲ್ಲಿ ಯಾವುದೇ ಸತ್ಯವಿಲ್ಲ. ಚರ್ಚೆ ಆಗುತ್ತಿರುವ ವಿಷಯಗಳೆಲ್ಲವೂ ಕೇವಲ ಊಹೆಗಳಷ್ಟೇ. ಪಾಕಿಸ್ತಾನದ ರಾಜಕೀಯ ಮತ್ತು ಪಿಸಿಬಿಯಿಂದ ದೂರವಿರುವಂತೆ ನನ್ನ ತಾಯಿ ನನಗೆ ಎಚ್ಚರಿಸಿದ್ದಾರೆ. ಹೀಗಿರುವಾಗ, ಅವರ ಸಲಹೆ, ಮಾತುಗಳನ್ನು ಪಾಲಿಸಲಷ್ಟೇ ನಾನು ಬದ್ಧ. ಪಾಕಿಸ್ತಾನ ಕ್ರಿಕೆಟ್​ಗೆ ಕೊಡುಗೆ ನೀಡುವುದು ನನಗೂ ಇಷ್ಟವೇ. ಹಾಗಂತ, ಅದಕ್ಕೆ ಮುಖ್ಯ ಆಯ್ಕೆಗಾರ ಹುದ್ದೆಯನ್ನೇ ಮಾಡಬೇಕು ಅಂತೇನಿಲ್ಲ ಎಂದು ಅಖ್ತರ್ 'ಪಿಟಿವಿ ಸ್ಪೋರ್ಟ್ಸ್' ಸಂದರ್ಶನದಲ್ಲಿ ಹೇಳಿದ್ದಾರೆ.

Also Read
ನೈಸ್‌ ಸಂಸ್ಥೆಗೆ ಕಾನೂನು ಸಮರದಲ್ಲಿ ಭಾರಿ ಹಿನ್ನಡೆ: ಹೈಕೋರ್ಟ್​ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ, ರೈತರಿಗೆ ಬಿಗ್​ ರಿಲೀಫ್​! NICE Land Acquisition Case
​​ Shoaib Akhtar

ಅಕಸ್ಮಾತ್​ ತನಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಫರ್​ ಕೊಟ್ಟಿದ್ದೇ ಆದರೂ ಆ ಹುದ್ದೆಯನ್ನು ನಾನು ರಿಜೆಕ್ಟ್​ ಮಾಡುವುದಂತು ಖಂಡಿತ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಇದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಮಾಡಿದ ಅವಮಾನ. ಆಫರ್​ ಕೊಡುವ ಮುನ್ನವೇ ಮುಖಕ್ಕೆ ಹೊಡೆದಂತೆ ಹೇಳಿರುವ ಅಖ್ತರ್​ಗೆ ಒಂದಷ್ಟು ನೆಟ್ಟಿಗರು ಸಾಥ್​ ನೀಡಿದರೆ, ಇನ್ನೂ ಕೆಲವರು ಇದು ಹೀಗೆ ಮುಂದುವರಿದರೆ, ಪಾಕಿಸ್ತಾನ ಕ್ರಿಕೆಟ್ ಗತಿ ಅದೋ ಗತಿ ಎಂದು ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net