2012, 2026... ಏನೇ ಬದಲಾದರೂ ರೋಹಿತ್-ಶಿಖರ್​ ವಿಚಾರದಲ್ಲಿ ಇದು ಮಾತ್ರ ಬದಲಾಗಿಲ್ಲ! ಕ್ರಿಕೆಟ್​ ಪ್ರೇಮಿಗಳು ಫಿದಾ | Shikhar Dhawan

ಶಿಖರ್​ ಧವನ್​ ಮತ್ತು ರೋಹಿತ್ ಶರ್ಮ
ಶಿಖರ್​ ಧವನ್​ ಮತ್ತು ರೋಹಿತ್ ಶರ್ಮ
Published on
ನವದೆಹಲಿ: ಇತ್ತೀಚೆಗಷ್ಟೇ ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ತಮ್ಮ ಗರ್ಲ್​ಫ್ರೆಂಡ್​ ಸೋಫಿ ಶೈನ್ ಅವರೊಂದಿಗೆ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಶುಭ ಘಳಿಗೆಗೆ ಎರಡೂ ಕುಟುಂಬಸ್ಥರು ಮತ್ತು ಸ್ಟಾರ್​ ಕ್ರಿಕೆಟಿಗರು ಸಾಕ್ಷಿಯಾದರು. 
ಧವನ್-ಸೋಫಿ ವಿವಾಹ ಸಮಾರಂಭಕ್ಕೆ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಸೇರಿ ಅನೇಕ ಟೀಮ್ ಇಂಡಿಯಾ ಹಾಗೂ ಇತರೆ ಕ್ರಿಕೆಟ್ ಸೆಲೆಬ್ರಿಟಿಗಳು ಮತ್ತು ಶಿಖರ್​ ಧವನ್​ ಅವರ ಆಪ್ತರು ಆಗಮಿಸಿ, ನವ ಜೋಡಿಗೆ ಶುಭಕೋರಿದರು. ಈ ಸಮಯದಲ್ಲಿ ಕ್ರಿಕೆಟ್​ ಪ್ರೇಮಿಗಳಿಗೆ ಒಂದು ವಿಷಯ ಮಾತ್ರ ಬಹಳ ಖುಷಿ ನೀಡಿತು. ಅದು ಶಿಖರ್ ಧವನ್​ ಮತ್ತು ರೋಹಿತ್ ಶರ್ಮ ಅವರ ಸ್ನೇಹ.
ಟೀಮ್ ಇಂಡಿಯಾದಲ್ಲಿ ಇಬ್ಬರೂ ತಂಡದಲ್ಲಿ ಆರಂಭಿಕ ಬ್ಯಾಟರ್​ಗಳಾಗಿ ಗುರುತಿಸಿಕೊಂಡವರು.  ಎಷ್ಟೋ ಪಂದ್ಯಗಳಲ್ಲಿ ಇವರಿಬ್ಬರ ಪ್ರದರ್ಶನಗಳು ಅಭಿಮಾನಿಗಳನ್ನು ರಂಜಿಸಿದ್ದು ಮಾತ್ರವಲ್ಲ, ತಂಡದ ಗೆಲುವಿಗೂ ಕಾರಣವಾಗಿದ್ದು ಹೌದು. ಅಂದಿನಿಂದ ಇಲ್ಲಿಯವರೆಗೆ ಸಾಗಿ ಬಂದಿರುವ ಶಿಖರ್-ರೋಹಿತ್​ ಸ್ನೇಹದ ಬಗ್ಗೆ ಇದೀಗ ನೆಟ್ಟಿಗರು ಕೊಂಡಾಡಿದ್ದಾರೆ. 
ಶಿಖರ್​ಗೆ ಅವರ ಮೊದಲ ಪತ್ನಿ ವಿಚ್ಛೇದನ ನೀಡುವ ಮೂಲಕ ಬಿಟ್ಟುಹೋದರು. ಆದ್ರೆ, ಅದೇ ರೋಹಿತ್​ ಮತ್ತು ಧವನ್ ನಡುವಿನ ಸ್ನೇಹ ಮಾತ್ರ ಇಂದಿಗೂ ಹಾಗೇ ಇದೆ. ಏನೇ ಬರಲಿ, ಏನೇ ಹೋಗಲಿ, ಒಬ್ಬ ನಿಜವಾದ ಫ್ರೆಂಡ್​ ಮಾತ್ರ ಎಂದಿಗೂ ಜೊತೆಯಲ್ಲೇ ನಿಲ್ಲುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಇವರಿಬ್ಬರ ಸ್ನೇಹಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. 

ಅಷ್ಟಕ್ಕೂ ಯಾರು ಈ ಸೋಫಿ ಶೈನ್​?

ಸೋಫಿ ಶೈನ್ ಅವರ ಹಿನ್ನೆಲೆ ತುಂಬಾ ಕುತೂಹಲವಾಗಿದೆ. ಸೋಫಿ ಅವರು ಐರ್ಲೆಂಡ್‌ ಮೂಲದವರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಚೆನ್ನಾಗಿ ಪರಿಣತಿ ಹೊಂದಿದ್ದಾರೆ. ಸೋಫಿ, ಕ್ಯಾಸಲ್‌ರಾಯ್ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಈ ಹಿಂದೆ ಪ್ರಾಡಕ್ಟ್​ ಸಲಹೆಗಾರರಾಗಿ ಕೆಲಸ ಮಾಡಿದ್ದ ಸೋಫಿ, ಪ್ರಸ್ತುತ ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಎರಡನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net