ಅಂದು ತೆಗೆದುಕೊಂಡ ನಿರ್ಧಾರದಿಂದ ಇಂದು 460 ಕೋಟಿ ರೂ. ಗಳಿಕೆ: ಸಾವಿನ ಬಳಿಕವೂ ಶೇನ್​ ವಾರ್ನ್​ ಸಂಪಾದನೆ! Shane Warne

ಅಂದು ತೆಗೆದುಕೊಂಡ ನಿರ್ಧಾರದಿಂದ ಇಂದು 460 ಕೋಟಿ ರೂ. ಗಳಿಕೆ: ಸಾವಿನ ಬಳಿಕವೂ ಶೇನ್​ ವಾರ್ನ್​ ಸಂಪಾದನೆ! Shane Warne
ಅಂದು ತೆಗೆದುಕೊಂಡ ನಿರ್ಧಾರದಿಂದ ಇಂದು 460 ಕೋಟಿ ರೂ. ಗಳಿಕೆ: ಸಾವಿನ ಬಳಿಕವೂ ಶೇನ್​ ವಾರ್ನ್​ ಸಂಪಾದನೆ! Shane Warne
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಮಾರಾಟ
  • 15,300 ಕೋಟಿ ರೂ.ಗಳಿಗೆ ಖರೀದಿಸಿದ ಉದ್ಯಮಿ ಕಲ್ ಸೋಮಾನಿ ನೇತೃತ್ವದ ಒಕ್ಕೂಟ
  • ಅತಿದೊಡ್ಡ ಮಾರಾಟದ ನಡುವೆ ಗಮನ ಸೆಳೆದ ಆಸ್ಟ್ರೇಲಿಯಾದ ದಿವಂಗತ ಆಟಗಾರ ಶೇನ್​ ವಾರ್ನ್ ಹೆಸರು
  • ಶೇನ್​ ವಾರ್ನ್​ ಅವರ ದೂರದೃಷ್ಟಿಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ 460 ಕೋಟಿ ರೂ. ಹಣ
Shane Warne : ಇಂಡಿಯನ್ ಪ್ರೀಮಿಯರ್ ಲೀಗ್-2026ರ ಆರಂಭಕ್ಕೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ಮತ್ತು ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿಗಳನ್ನು ಮಾರಾಟ ಮಾಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಪ್ರಮುಖ ತಂತ್ರಜ್ಞಾನ ಉದ್ಯಮಿ ಕಲ್ ಸೋಮಾನಿ ನೇತೃತ್ವದ ಒಕ್ಕೂಟವು ಆರ್​ಆರ್​ ತಂಡವನ್ನು 15,300 ಕೋಟಿ ರೂ.ಗಳಿಗೆ ಖರೀದಿಸಿದರೆ, ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ಒಕ್ಕೂಟ ಆರ್​ಸಿಬಿ ತಂಡವನ್ನು ಬರೋಬ್ಬರಿ 16,706 ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಂಡಿವೆ. ಈ ಅತಿದೊಡ್ಡ ಮಾರಾಟದ ನಡುವೆ ಆಸ್ಟ್ರೇಲಿಯಾದ ದಿವಂಗತ ಆಟಗಾರ ಶೇನ್​ ವಾರ್ನ್ ಅವರ ಹೆಸರು ಎಲ್ಲರ ಗಮನ ಸೆಳೆದಿದೆ.​
ಶೇನ್​ ವಾರ್ನ್​ ಅವರು ರಾಜಸ್ಥಾನ ರಾಯಲ್ಸ್‌ ತಂಡದ ಮೊದಲ ನಾಯಕ ಅನ್ನೋದು ಎಲ್ಲರಿಗೂ ತಿಳಿದಿದೆ. ಚೊಚ್ಚಲ ಐಪಿಎಲ್​ ಆವೃತ್ತಿಯಲ್ಲೇ ಆರ್​ಆರ್​ ತಂಡಕ್ಕೆ ಶೇನ್​ ವಾರ್ನ್​ ಟ್ರೋಫಿ ಗೆಲ್ಲಿಸಿಕೊಟ್ಟರು. ಅಂದು ಶೇನ್​ ವಾರ್ನ್​ ಅವರ ದೂರದೃಷ್ಟಿಯಿಂದಾಗಿ ಇಂದು ಅವರ ಕುಟುಂಬ 460 ಕೋಟಿ ರೂಪಾಯಿಗಳನ್ನು ಪಡೆಯಲಿದೆ. ರಾಜಸ್ಥಾನ ರಾಯಲ್ಸ್ ತಂಡ ಮಾರಾಟದಿಂದಾಗಿ ಈ ಹಣ ಸಿಗುತ್ತಿದೆ. ಶೇನ್ ವಾರ್ನ್ ಅವರು ಮೃತಪಟ್ಟರು ಕೂಡ ಅವರ ಮಕ್ಕಳು ಭರ್ಜರಿ ಹಣಕಾಸು ಲಾಭ ಪಡೆಯಲಿದ್ದಾರೆ.
ಅಂದು ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ದಿವಂಗತ ಶೇನ್ ವಾರ್ನ್ ತೆಗೆದುಕೊಂಡ ಬುದ್ಧಿವಂತ ನಿರ್ಧಾರದಿಂದ ಇಂದು 460 ಕೋಟಿ ರೂ. ಆದಾಯ ಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ 2008 ರಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಶೇನ್ ವಾರ್ನ್ ನಾಯಕನಾಗಿ ಸೇವೆ ಸಲ್ಲಿಸಿದರು. ಮೊದಲ ಸೀಸನ್‌ನಲ್ಲಿಯೇ ಅವರು ರಾಜಸ್ಥಾನ ರಾಯಲ್ಸ್‌ಗೆ ಪ್ರಶಸ್ತಿಯನ್ನು ತಂದುಕೊಟ್ಟರು. ಆದಾಗ್ಯೂ, ಮೊದಲ ಸೀಸನ್‌ನಲ್ಲೇ ಶೇನ್ ವಾರ್ನ್ ಕೆಲವು ಷರತ್ತುಗಳನ್ನು ವಿಧಿಸಿದರು.

ಷರತ್ತುಗಳೇನು?

ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಡಲು ಸಂಬಳದ ಜೊತೆಗೆ, ಪ್ರತಿ ವರ್ಷ ತಂಡದಲ್ಲಿ ಶೇ. 0.75 ರಷ್ಟು ಪಾಲನ್ನು ಪಡೆಯಲು ಶೇನ್​ ವಾರ್ನ್​ ತುಂಬಾ ಜಾಣತನದಿಂದ ಒಪ್ಪಂದ ಮಾಡಿಕೊಂಡರು. ಸತತ ನಾಲ್ಕು ಋತುಗಳಲ್ಲಿ ಆಡಿದ ನಂತರ, ಶೇನ್ ವಾರ್ನ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಶೇ. 3 ರಷ್ಟು ಪಾಲನ್ನು ಪಡೆದರು. ಇದರ ನಡುವೆ ಸಂಬಳದ ರೂಪದಲ್ಲಿ ಕೇವಲ 9.35 ಕೋಟಿ ರೂ.ಗಳನ್ನು ಪಡೆದರು. ರಾಜಸ್ಥಾನ ರಾಯಲ್ಸ್ ತಂಡವನ್ನು ಇತ್ತೀಚೆಗೆ 15,301 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಯಿತು. ಇದರರ್ಥ ಈಗ ಶೇ. 3 ರಷ್ಟು ಷೇರನ್ನು ಹೊಂದಿರುವ ಶೇನ್ ವಾರ್ನ್ ಕುಟುಂಬವು 460 ಕೋಟಿ ರೂ.ಗಳನ್ನು ಪಡೆಯುತ್ತದೆ. ಆ ಹಣ ಶೇನ್ ವಾರ್ನ್ ಅವರ ಮಕ್ಕಳಾದ ಬ್ರೂಕ್, ಜಾಕ್ಸನ್ ಮತ್ತು ಸಮ್ಮರ್‌ಗೆ ಹೋಗುತ್ತವೆ.

ಶೇನ್​ ವಾರ್ನ್​ ಅನುಮಾನಾಸ್ಪದ ಸಾವು

ಆಸ್ಟ್ರೇಲಿಯಾ ತಂಡಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದ ಶೇನ್ ವಾರ್ನ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಅಂತಹ ಶೇನ್ ವಾರ್ನ್, 2022ರ ಮಾರ್ಚ್ 4 ರಂದು ಥೈಲ್ಯಾಂಡ್‌ನಲ್ಲಿ ಅನುಮಾನಾಸ್ಪದವಾಗಿ ನಿಧನರಾದರು. ತಮ್ಮ ಸ್ನೇಹಿತರೊಂದಿಗೆ ಥೈಲ್ಯಾಂಡ್‌ಗೆ ಹೋಗಿದ್ದ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾದರು. ಆದಾಗ್ಯೂ, ಅವರು ಸಹಜವಾಗಿ ಸಾವಿಗೀಡಾಗಿದ್ದಾರೆಯೇ ಅಥವಾ ಕೊಲೆ ಮಾಡಿದ್ದಾರೆಯೇ? ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆ ಸಮಯದಲ್ಲಿ ಪೊಲೀಸರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net