ಆರಂಭದಲ್ಲಿ ಟಿ20 ವಿಶ್ವಕಪ್ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿತು. ಐಸಿಸಿ ಮತ್ತು ಭಾರತ, ಬಾಂಗ್ಲಾದೇಶವನ್ನು ಕೆಟ್ಟದಾಗಿ ನಡೆಸಿಕೊಂಡಿರುವುದನ್ನು ಉಲ್ಲೇಖಿಸಿ ಪಾಕಿಸ್ತಾನ ಬಹಿಷ್ಕಾರದ ಬೆದರಿಕೆ ಹಾಕಿತು. ಇದಾದ ನಂತರ, ಪಾಕಿಸ್ತಾನ ಪಂದ್ಯಾವಳಿಯನ್ನು ಆಡಲು ಸೈಲೆಂಟ್ ಆಗಿ ಕೊಲಂಬೊಗೆ ಬಂದಿತು. ಐಸಿಸಿಯಿಂದ ಬ್ಯಾನ್ ಆಗುವ ಭೀತಿಯಿಂದಾಗಿ ಬಹಿಷ್ಕಾರದ ಬೆದರಿಕೆಯಿಂದ ಹಿಂದೇಟು ಹಾಕಿತು. ಈ ಮೂಲಕ ವಿಶ್ವ ಕ್ರಿಕೆಟ್ ಜಗತ್ತಿನ ಎದುರು ಪಾಕ್ ಮುಖಭಂಗ ಅನುಭವಿಸಿತು. ಆದರೆ, ಪಾಕಿಸ್ತಾನ ತನ್ನ ವರಸೆಯನ್ನು ಇಷ್ಟಕ್ಕೆ ನಿಲ್ಲಿಸಲಿಲ್ಲ. ಫೆಬ್ರವರಿ 15 ರಂದು ಭಾರತದ ವಿರುದ್ಧ ನಡೆಯಬೇಕಿರುವ ಹೈವೋಲ್ಟೇಜ್ ಪಂದ್ಯವನ್ನು ಆಡದೆ ಹೊಸ ನಾಟಕವನ್ನು ಆರಂಭಿಸಿತು. ಭಾರತ ವಿರುದ್ಧ ಆಡುವುದಿಲ್ಲ ಎಂದು ಪಾಕ್ ಹೇಳಿತು. ಆದಾಗ್ಯೂ, ಐಸಿಸಿ ಖಡಕ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೆತ್ತಗಾದ ಪಾಕ್, ಅಂತಿಮವಾಗಿ ಟೀಮ್ ಇಂಡಿಯಾ ವಿರುದ್ಧ ಆಡಲು ಒಪ್ಪಿಕೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ಪಾಕ್ ಸರ್ಕಾರ ಅನುಮತಿ ನೀಡಿದೆ.