ಗಿಲ್ ಜೊತೆ ಸಿಕ್ರೇಟ್​ ಮ್ಯಾರೇಜ್​? ಜೈಪುರದಲ್ಲಿ ನಡೆದ ಮದುವೆ ವದಂತಿ ಬಗ್ಗೆ ಮೌನ ಮುರಿದ ರಿಧಿಮಾ ಪಂಡಿತ್! Ridhima Pandit

ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ನಟಿ ರಿಧಿಮಾ ಪಂಡಿತ್
ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ನಟಿ ರಿಧಿಮಾ ಪಂಡಿತ್
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ನಟಿ ರಿಧಿಮಾ ಪಂಡಿತ್ ಮದುವೆ ಬಗ್ಗೆ ಹಬ್ಬಿದ್ದ ವದಂತಿ
  • ನನಗೆ ಕ್ರಿಕೆಟಿಗ ಶುಭಮನ್ ಗಿಲ್ ಪರಿಚಯವೇ ಇಲ್ಲ ಎಂದ ನಟಿ
  • ನಮ್ಮ ನಡುವೆ ಯಾವುದೇ ಪ್ರೀತಿ-ಪ್ರೇಮವಿಲ್ಲ ಎಂದ ನಟಿ
ಮುಂಬೈ: ಟೀಮ್ ಇಂಡಿಯಾದ ಪ್ರಿನ್ಸ್ ಶುಭಮನ್ ಗಿಲ್ (Shubman Gill) ಮತ್ತು ಕಿರುತೆರೆಯ ಜನಪ್ರಿಯ ನಟಿ ರಿಧಿಮಾ ಪಂಡಿತ್ (Ridhima Pandit) ನಡುವೆ ಗೆಳೆತನವನ್ನು ಮೀರಿದ ಸಂಬಂಧವಿದೆ ಎಂಬ ಗುಸುಗುಸು ಕಳೆದ ಎರಡು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅಷ್ಟೇ ಅಲ್ಲ, 2024ರ ಡಿಸೆಂಬರ್‌ನಲ್ಲಿ ಇವರಿಬ್ಬರೂ ಜೈಪುರದಲ್ಲಿ ಗುಟ್ಟಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಇದೀಗ ಈ ಎಲ್ಲಾ ವದಂತಿಗಳಿಗೆ ರಿಧಿಮಾ ಪಂಡಿತ್ ಖಡಕ್ ಆಗಿ ಉತ್ತರ ನೀಡಿದ್ದಾರೆ.

ನಾನು ತುಂಬಾ ಬೋರಿಂಗ್ ವ್ಯಕ್ತಿ!

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಿಧಿಮಾ, ನನ್ನ ಬಗ್ಗೆ ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು. ನಾನು ವಿವಾದಗಳಿಂದ ದೂರವಿರಲು ಇಷ್ಟಪಡುವ ವ್ಯಕ್ತಿ. ನಾನು ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ, ಎಂದಿಗೂ ತಪ್ಪು ಮಾತನಾಡಿಲ್ಲ. ನಿಜ ಹೇಳಬೇಕೆಂದರೆ ನಾನು ತುಂಬಾ ಬೋರಿಂಗ್​ ವ್ಯಕ್ತಿ. ನನ್ನ ಬಗ್ಗೆ ಅಗೆಯಲು ಹೋದರೆ ನಿಮಗೆ ಯಾವುದೇ ಗಾಸಿಪ್ ಸಿಗುವುದಿಲ್ಲ! ಎಂದು ತಮಾಷೆಯಾಗಿ ಹೇಳಿದ್ದಾರೆ.
ಶುಭಮನ್ ಕ್ಯೂಟ್, ಆದರೆ...
ಇನ್ನೊಂದು ಸಂದರ್ಶನದಲ್ಲಿ ಶುಭಮನ್ ಗಿಲ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಿಧಿಮಾ, ಶುಭಮನ್ ತುಂಬಾ ಮುದ್ದಾಗಿ ಕಾಣುತ್ತಾರೆ ನಿಜ, ಅವರು ಅದ್ಭುತ ಆಟಗಾರ ಕೂಡ ಹೌದು. ಆದರೆ, ನನಗೆ ಅವರ ಪರಿಚಯವೇ ಇಲ್ಲ. ಒಂದು ವೇಳೆ ನಾನು ಅವರನ್ನು ಎಂದಾದರೂ ಭೇಟಿಯಾದರೆ, ನಮ್ಮಿಬ್ಬರ ಬಗ್ಗೆ ಹರಡುತ್ತಿರುವ ಈ ಮದುವೆ ಸುದ್ದಿಯನ್ನು ನೋಡಿ ಖಂಡಿತವಾಗಿಯೂ ನಗುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ಪ್ರಣಯ ಸಂಬಂಧವಿಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ವಿವಾದಗಳ ಸುಳಿಯಲ್ಲಿ ನಟಿ

ಕೇವಲ ಡೇಟಿಂಗ್ ವದಂತಿಗಳಷ್ಟೇ ಅಲ್ಲ, ರಿಧಿಮಾ ಇತ್ತೀಚೆಗೆ ದಿ 50 ಎಂಬ ರಿಯಾಲಿಟಿ ಶೋನಲ್ಲಿ ವಂಶಜ್ ಸಿಂಗ್ ಎಂಬ ಕಂಟೆಂಟ್ ಕ್ರಿಯೇಟರ್ ಜೊತೆಗಿನ ಕಿತ್ತಾಟ ತಾರಕಕ್ಕೇರಿತ್ತು. ಇದರ ಪರಿಣಾಮವಾಗಿ ರಿಧಿಮಾ ಅವರಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಸಹ ಬಂದಿದ್ದವು. ಈ ಬಗ್ಗೆ ಎದಗುಂದದ ನಟಿ, ಕಿರುಕುಳ ನೀಡಿದ ವಂಶಜ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಯಾರು ಈ ರಿಧಿಮಾ ಪಂಡಿತ್?

ರಿಧಿಮಾ ಪಂಡಿತ್ ಕಿರುತೆರೆಯ ಜನಪ್ರಿಯ ನಟಿ. ಬಹು ಹಮಾರಿ ರಜನಿ ಕಾಂತ್ ಧಾರಾವಾಹಿಯಲ್ಲಿ ರೋಬೋಟ್ ಸೊಸೆಯ ಪಾತ್ರದ ಮೂಲಕ ಅವರು ಮನೆಮಾತಾಗಿದ್ದರು. ನಂತರ ನಾಗಿನ್ 5 ನಲ್ಲಿ ಬನಿ ಶರ್ಮಾ ಪಾತ್ರದಲ್ಲಿ ಮಿಂಚಿದ್ದರು. 2019ರ ಖತ್ರೋನ್ ಕೆ ಕಿಲಾಡಿ 9 ಸಾಹಸಮಯ ಶೋನಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ನಟನೆಯ ಜೊತೆ ತಮ್ಮ ಧೈರ್ಯವನ್ನು ಜನರಿಗೆ ಸಾಭೀತು ಪಡಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net