Second Ashes Test; ಗಬ್ಬಾದಲ್ಲಿ ಗೆದ್ದು ಬೀಗಿದ ಆಸಿಸ್​: ನೆಸರ್ ಬೌಲಿಂಗ್​ ದಾಳಿಗೆ ಮಕಾಡೆ ಮಲಗಿದ ಆಂಗ್ಲರು

Second Ashes Test
Second Ashes Test
Published on
ಬ್ರಿಸ್ಬೇನ್: ಬ್ರಿಸ್ಬೇನ್​ನ ಗಬ್ಬಾದಲ್ಲಿ ನಡೆದ ಎರಡನೇ ಆಶಸ್ ಟೆಸ್ಟ್​ನಲ್ಲಿ(Second Ashes Test) ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಬಂದ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್​ನಲ್ಲಿ ಆರಂಭಿಕ ಆಟಗಾರನಾದ ಜ್ಯಾಕ್ ಕ್ರಾಲಿ 76 ರನ್ ಗಳಿಸಿದರು. ನಂತರ ಬಂದ ಜೋ ರೂಟ್ ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ಟೆಸ್ಟ್ ಶತಕವನ್ನು ಬಾರಿಸಿದರು, 206 ಎಸೆತಗಳಲ್ಲಿ 138 ರನ್ ಗಳಿಸಿದರು. ಇದಲ್ಲದೆ, ಜೋಫ್ರಾ ಆರ್ಚರ್ 38 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 334 ರನ್ ಸರ್ವಪತನ ಕಂಡಿತು.
ಆತಿಥೇಯರು ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಓಪನರ್​ಗಳಾದ ಟ್ರಾವಿಸ್ ಹೆಡ್ ಮತ್ತು ಜೇಕ್ ವೆದರಾಲ್ಡ್ ಕ್ರಮವಾಗಿ 33 ಮತ್ತು 72 ರನ್‌ಗಳೊಂದಿಗೆ ಇನ್ನಿಂಗ್ಸ್​​​​ನ್ನು ಉತ್ತಮವಾಗಿ ಪ್ರಾರಂಭಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಬಂದ ಮಾರ್ನಸ್ ಲ್ಯಾಬುಶೇನ್ 65 ರನ್‌ ಬಾರಿಸಿದರು. ಕಾಂಗರೂ ನಾಯಕ ಸ್ಟೀವ್ ಸ್ಮಿತ್ 61 ರನ್ ಗಳಿಸಿದರು. ವಿಕೆಟ್​ಕೀಪರ್​ ಅಲೆಕ್ಸ್ ಕ್ಯಾರಿ 63 ಮತ್ತು ಮಿಚೆಲ್ ಸ್ಟಾರ್ಕ್ 77 ರನ್‌ ಹೊಡುಗೆಯಿಂದ ಆಸ್ಟ್ರೇಲಿಯಾ 511 ರನ್‌ಗಳನ್ನು ಅಲೌಟ್​ ಆಯಿತು. ಅಲ್ಲದೆ, ಪ್ರವಾಸಿ ತಂಡದ ವಿರುದ್ಧ 175ರನ್​ ದೊಡ್ಡ ಮುನ್ನಡೆ ಸಾಧಿಸಿತು.

ದ್ವೀತಿಯ ಇನಿಂಗ್ಸ್​ನಲ್ಲಿ ಕುಸಿದ ಆಂಗ್ಲರು

175 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಅರಂಭಿಸಿದ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಗುರಿ ಹೊಂದಿತ್ತು, ಆದರೆ, ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ಇಂಗ್ಲೆಂಡ್ ಮತ್ತೊಮ್ಮೆ ಕುಸಿತ ಕಂಡಿತು. ಆಂಗ್ಲರ ಪರ ಜ್ಯಾಕ್ ಕ್ರಾಲಿ 59 ಎಸೆತಗಳಲ್ಲಿ 44 ರನ್ ಗಳಿಸಿ ತಮ್ಮ ಫಾರ್ಮ್ ಅನ್ನು ಮುಂದುವರಿಸಿದರು. ನಾಯಕ ಬೆನ್ ಸ್ಟೋಕ್ಸ್ 50 ರನ್ ಗಳಿಸಿದರು. ಇಂಗ್ಲೆಂಡ್ 241 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆಸ್ಟ್ರೇಲಿಯಾಕ್ಕೆ 65 ರನ್‌ಗಳ ಗುರಿಯನ್ನು ನೀಡಿತು.
ಗುರಿಯನ್ನು ಬೆನ್ನಟ್ಟಲು ಬಂದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 22 ರನ್ ಗಳಿಸಿದರು. ಜೇಕ್ ವೀದರಾಲ್ಡ್ ಮತ್ತು ಸ್ಟೀವ್ ಸ್ಮಿತ್ ಅಜೇಯ 17 ಮತ್ತು 23 ರನ್ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿತು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net