ಇಂಗ್ಲೆಂಡ್ ವಿರುದ್ಧ ಸೋತ ಪಾಕಿಸ್ತಾನ ಸದ್ಯ ಸೆಮಿಫೈನಲ್ ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ. ಈ ಮಧ್ಯೆ, ನ್ಯೂಸ್ ಚಾನೆಲ್ನ ಲೈವ್ ಡಿಬೆಟ್ನಲ್ಲಿ ಪಾಕಿಸ್ತಾನದ ಮಾಜಿ ಹಿರಿಯ ಕ್ರಿಕೆಟಿಗರಾದ ಮೊಹಮ್ಮದ್ ಹಫೀಜ್, ಶೋಯೆಬ್ ಆಖ್ತರ್, ಸಕ್ಲೇನ್ ಮುಷ್ತಾಕ್ ಸೇರಿ ಇನ್ನು ಕೆಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಲೈವ್ ಮಧ್ಯೆಯೇ ಹಫೀಜ್ ಮತ್ತು ಸಕ್ಲೇನ್ ಏಕಾಏಕಿ ಮಾತಿನ ಜಟಾಪಟಿಯಲ್ಲಿ ಕಿತ್ತಾಡಿಕೊಂಡರು.