"ಕೊಹ್ಲಿ ಹೇಳಿದ ಶಿಸ್ತನ್ನು ನಾನು ಒಂದು, ಒಂದೂವರೆ ವರ್ಷ ಶ್ರದ್ಧೆಯಿಂದ ಪಾಲಿಸಿದೆ. ಆದರೆ, ಆಮೇಲೆ ನನಗೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಲ್ಲಿಗೆ, ನಾನು ಅವರ ಮಾತನ್ನು ತಪ್ಪಿದೆ ಎಂದು ಸಂಜು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ ತಂಡದಲ್ಲಿ ಅವಕಾಶ ಮಿಸ್ ಮಾಡಿಕೊಂಡ ಸಂಜು, ಮುಂದಿನ ಟೂರ್ನಿಗಳಲ್ಲಿ ತಂಡ ಸೇರುವ ಭರವಸೆಯನ್ನು ಹೊಂದಿದ್ದಾರೆ,(ಏಜೆನ್ಸೀಸ್).