ಮೊದಲು ನೀನು... ಅಭಿಷೇಕ್​ ಶರ್ಮ ಕಂಡರೆ ಸಂಜುಗೆ ಯಾಕಿಷ್ಟು ಹೊಟ್ಟೆಕಿಚ್ಚು? ಸ್ಯಾಮ್ಸನ್​ ಹೇಳಿಕೆ ವೈರಲ್ | Sanju Samson

ಸಂಜು ಸ್ಯಾಮ್ಸನ್(ಎಡ), ಅಭಿಷೇಕ್ ಶರ್ಮ(ಬಲ)
ಸಂಜು ಸ್ಯಾಮ್ಸನ್(ಎಡ), ಅಭಿಷೇಕ್ ಶರ್ಮ(ಬಲ)
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್​ ಎದುರು ಭಾರತಕ್ಕೆ 96 ರನ್​ಗಳ ಭರ್ಜರಿ ಗೆಲುವು
  • ಟಿ20 ವಿಶ್ವಕಪ್​ನಲ್ಲಿ ತಂಡದ ಪರ ಸಂಜು ಅಮೋಘ ಬ್ಯಾಟಿಂಗ್
  • ಸಂದರ್ಶನದಲ್ಲಿ ಅಭಿಷೇಕ್ ಶರ್ಮ ಕುರಿತು ಸಂಜು ಮುಕ್ತ ಮಾತು
ನವದೆಹಲಿ: ನ್ಯೂಜಿಲೆಂಡ್​ ಎದುರು 96 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಮೂರನೇ ಬಾರಿಗೆ ಟಿ20 ವಿಶ್ವಕಪ್​ ಎತ್ತಿಹಿಡಿದಿದ್ದು ಈಗ ಇತಿಹಾಸ. ಫೈನಲ್ ಪಂದ್ಯದಲ್ಲಿಯೂ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ ದಕ್ಷಿಣ ಭಾರತ ಸ್ಟಾರ್​ ಬ್ಯಾಟರ್​ ಸಂಜು ಸ್ಯಾಮ್ಸನ್ (Sanju Samson)​, ಕೇವಲ 46 ಎಸೆತಗಳಲ್ಲಿ 89 ರನ್​ಗಳ ಉತ್ತಮ ಕೊಡುಗೆ ನೀಡಿದ್ದು ವಿಶೇಷ. ಸೂಪರ್​-8, ಸೆಮಿಫೈನಲ್​ ಮತ್ತು ಫೈನಲ್​ನಂತಹ ಬಹುಮುಖ್ಯ​ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ಕೊಟ್ಟ ಸಂಜುಗೆ ಕ್ರಿಕೆಟ್​ ದಿಗ್ಗಜರಿಂದ ಹಿಡಿದು ರಾಜಕೀಯ, ಚಿತ್ರೋದ್ಯಮ ಸೇರಿ ಹಲವು ಕ್ಷೇತ್ರಗಳ ಗಣ್ಯರು ಬೆನ್ನುತಟ್ಟಿದ್ದಾರೆ. ಸದ್ಯ ರಿಲ್ಯಾಕ್ಸಿಂಗ್ ಮೂಡ್​ನಲ್ಲಿರುವ ಸ್ಯಾಮ್ಸನ್​, ತಮ್ಮ ಸಹ ಆಟಗಾರ ಅಭಿಷೇಕ್ ಶರ್ಮ ಬಗ್ಗೆ ಆಡಿರುವ ಮಾತುಗಳು ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಎಡಗೈ ಸ್ಟಾರ್​ ಬ್ಯಾಟರ್​ ಅಭಿಷೇಕ್ ಶರ್ಮ ಜೊತೆ ಓಪನಿಂಗ್ ಬರುತ್ತಿದ್ದ ಸಂಜು ಸ್ಯಾಮ್ಸನ್​, ಟೂರ್ನಿ ಪೂರ ಕ್ರಿಕೆಟ್​ ಅಭಿಮಾನಿಗಳು ಮತ್ತು ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆ, ಪ್ರಶಂಸೆ ಪಡೆದಿದ್ದು ವಿಶೇಷ. ಗ್ರೂಪ್​ ಸ್ಟೇಜ್​ ಹಂತದ ಮೂರು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಡಕ್​ಔಟ್ ಆದ ಅಭಿಷೇಕ್​, ಸೂಪರ್​-8 ಹಾಗೂ ಫೈನಲ್​ ಪಂದ್ಯದಲ್ಲಿಯೂ ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದರು. ಇದು ಭಾರೀ ಟೀಕೆಗೂ ಗುರಿಯಾಯಿತು. ಆದರೀಗ, ಅಭಿ ಮೇಲೆ ಸಂಜುಗೆ ಯಾಕಿಷ್ಟು ಹೊಟ್ಟೆ ಕಿಚ್ಚು ಎಂಬುದರ ಬಗ್ಗೆ ಅವರಾಡಿರುವ ಈ ಮಾತುಗಳನ್ನು ಕೇಳಿದರೆ ಗೊತ್ತಾಗುತ್ತದೆ.
ಇಂಡಿಯಾ ಟುಡೇ ಸಂದರ್ಶನದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾಗವಹಿಸಿ, ಹಲವು ಆಸಕ್ತಿದಾಯಕ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡರು. ಈ ವೇಳೆ ಅಭಿಷೇಕ್​ ಬಗ್ಗೆ ಪ್ರತಿಕ್ರಿಯಿಸಿದ ಸಂಜು, ಆತನ ಜನಪ್ರಿಯತೆ ಹೆಚ್ಚುತ್ತಿರುವುದನ್ನು ನೋಡಿ, ತಂಡದ ಇತರ ಆಟಗಾರರು ಸ್ವಲ್ಪ ಅಸೂಯೆ ಪಟ್ಟಿದ್ದು ನಿಜ ಎಂದು ತಮಾಷೆಯಾಗಿ ಹೇಳಿದರು. ಟಿ20 ವಿಶ್ವಕಪ್‌ಗೆ ಮೊದಲು ಭಾರತೀಯ ತಂಡ ಎಲ್ಲಿಗೆ ಪ್ರಯಾಣಿಸಿದರೂ, ಫ್ಯಾನ್ಸ್​ ಫಸ್ಟ್​ ಅಭಿ ನೋಡಲು ಮುಗಿಬೀಳುತ್ತಿದ್ದರು ಎಂದರು.
ಆರಂಭದಲ್ಲಿ ನಮ್ಮವರೆಲ್ಲ ಅಭಿಷೇಕ್​ಗೋಸ್ಕರ ಬಂದು ಕ್ಯೂನಿಲ್ಲುತ್ತಿದ್ದ ಅಭಿಮಾನಿಗಳನ್ನು ನೋಡಿ ಒಂದು ನಿಮಿಷ ಅಚ್ಚರಿ ಪಡುತ್ತಿದ್ದರು. ಕೆಲವೊಮ್ಮೆ ಅಭಿ...ಅಭಿ ಎಂದು ಕಿರುಚಾಡುತ್ತಿದ್ದರು. ಮೈದಾನದಲ್ಲಿದ್ದ ಜನರಿಗೆ ನಾವುಗಳು ಇದ್ದೇವೆ ಅನ್ನೋದು ಗೊತ್ತಿತ್ತೋ, ಇಲ್ಲವೋ. ಆದರೆ, ಅಭಿಷೇಕ್ ಇರುವುದಂತು ಖಚಿತ ಪಡಿಸಿಕೊಳ್ಳುತ್ತಿದ್ದರು. ಇದನ್ನು ನೋಡಿದ ನಾವು, ಅಭಿ ಭಾಯ್​, ಶೀಘ್ರವೇ ಮದುವೆಯಾಗು. ಆಗಲಾದರೂ ಅವರ ಕಣ್ಣಿಗೆ ನಾವೂ ಕಾಣಿಸುತ್ತೀವಿ ಎಂದು ನಗುತ್ತಲೇ ಹೇಳುತ್ತಿದ್ದೆವು ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net