115, 101... ಧೋನಿ, ರೈನಾ, ಹಸ್ಸಿಯಿಂದಲೇ ಆಗದ ಕೆಲಸ ಸಂಜು ಸ್ಯಾಮ್ಸನ್​ರಿಂದ ಸಾಧ್ಯವಾಯ್ತು! | Sanju Samson

ಸಿಎಸ್​ಕೆ ತಂಡದ ಆಟಗಾರರು
ಸಿಎಸ್​ಕೆ ತಂಡದ ಆಟಗಾರರು
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ವಿರುದ್ಧ 103 ರನ್‌ಗಳ ದಾಖಲೆಯ ಗೆಲುವು ಸಾಧಿಸಿದ ಚೆನ್ನೈ
  • 54 ಎಸೆತಗಳಲ್ಲಿ 101* ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಂಜು
  • ಸಿಎಸ್​ಕೆ ದಿಗ್ಗಜರೇ ಮಾಡದ ಸಾಧನೆಯನ್ನು ತನ್ನದಾಗಿಸಿಕೊಂಡ ಸಂಜು ಸ್ಯಾಮ್ಸನ್​
Sanju Samson: ನಿನ್ನೆ (ಏ.22) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಸಂಜು ಸ್ಯಾಮ್ಸನ್ ಅವರ ಅಜೇಯ ಶತಕದ (54 ಎಸೆತಗಳಲ್ಲಿ 101*) ನೆರವಿನಿಂದ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹೀನಾಯ ಸೋಲನ್ನು ಅನುಭವಿಸಿತು. ಸಿಎಸ್​ಕೆ ಪರ ಎರಡನೇ ಶತಕ ಬಾರಿಸಿದ ಸಂಜು, ತಮ್ಮ ಐಪಿಎಲ್​ ಕರಿಯರ್​ನಲ್ಲಿ ಒಟ್ಟು ಐದು ಸೆಂಚುರಿ ಹೊಡೆದಿದ್ದಾರೆ.
10 ಬೌಂಡರಿ ಮತ್ತು 6 ಸಿಕ್ಸರ್​ ಸಹಾಯದಿಂದ 101 ರನ್ ಬಾರಿಸಿದ ಸಂಜು ಸ್ಯಾಮ್ಸನ್​, ಐಪಿಎಲ್​ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಶತಕ ಹೊಡೆದ ಮೊದಲ ಸಿಎಸ್​ಕೆ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇದರೊಟ್ಟಿಗೆ, ಶೇನ್​ ವ್ಯಾಟ್ಸನ್​ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ತಮ್ಮ ಫ್ರಾಂಚೈಸಿ ಪರ ಒಂದೇ ಆವೃತ್ತಿಯಲ್ಲಿ ಎರಡು ಶತಕಗಳನ್ನು ಬಾರಿಸಿದ ಎರಡನೇ ಬ್ಯಾಟರ್​ ಆಗಿ ಸಂಜು ಸ್ಥಾನ ಪಡೆದಿದ್ದಾರೆ.
ಇದೇ ಸಿಎಸ್​ಕೆ ಎದುರು ಸನತ್​ ಜಯಸೂರ್ಯ (2008ರಲ್ಲಿ ಅಜೇಯ 114 ರನ್) ಮತ್ತು ರೋಹಿತ್ ಶರ್ಮ (2024ರಲ್ಲಿ ಅಜೇಯ 105 ರನ್​) ಮುಂಬೈ ಇಂಡಿಯನ್ಸ್ ಪರ ಶತಕಗಳನ್ನು ಬಾರಿಸಿದ್ದಾರೆ. ಚೆನ್ನೈ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು, ಎಂದಿನಂತೆ ತಮ್ಮ ತಂಡದ ಇತರೆ ಬ್ಯಾಟರ್​ಗಳು ವಿಕೆಟ್​ ಕಳೆದುಕೊಂಡು ಪೆವಿಲಿಯನ್​ನತ್ತ ಮುಖಮಾಡುತ್ತಿದ್ದರೂ ಸಹ ಎಲ್ಲಿಯೂ ಗಮನ ಕಳೆದುಕೊಳ್ಳದೆ, ಕೊನೆಯ ಓವರ್​ವರೆಗೂ ನಿಂತು ಶತಕದಾಟ ತೋರಿದ್ದು ನಿಜಕ್ಕೂ ಗಮನಾರ್ಹ.
ಅಕಸ್ಮಾತ್​, ಸಂಜು ಏನಾದೂ ಮಿಡಲ್​ ಓವರ್​ಗಳಲ್ಲಿ ವಿಕೆಟ್​ ಕಳೆದುಕೊಂಡಿದ್ದರೆ, ಖಂಡಿತ ಚೆನ್ನೈ ಪಡೆಯ ಇನ್ಯಾವ ಬ್ಯಾಟರ್​ ಕೂಡ ಹೆಚ್ಚು ಕಾಲ ನಿಂತು ಆಡುತ್ತಿರಲಿಲ್ಲ. ಮತ್ತು ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಇಲ್ಲಿ ಸ್ಪಷ್ಟ. ಪ್ರಸ್ತುತ, ಸಿಎಸ್​ಕೆ ತಂಡಕ್ಕೆ ಬ್ಯಾಟಿಂಗ್​ ಯೂನಿಟ್​ನಲ್ಲಿ ಆನೆಬಲ ತುಂಬಿರುವ ಸ್ಯಾಮ್ಸನ್​, ಉಳಿದ ಬ್ಯಾಟರ್​ಗಳಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದಾರೆ. ಆದರೆ, ಕ್ಯಾಪ್ಟನ್​ ರುತುರಾಜ್​ರಿಂದ ಹಿಡಿದು ಯಾರಿಂದಲೂ ಅವರಿಗೆ ಉತ್ತಮ ಸಾಥ್ ಸಿಗದಿರುವುದು ದುರಂತ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net