ಅಂತಿಮವಾಗಿ, ತಮ್ಮ ಆಕರ್ಷಕ ಇನ್ನಿಂಗ್ಸ್ ನಂತರದ ಭಾವನಾತ್ಮಕ ಸಂಭ್ರಮಾಚರಣೆಯು ವೈಯಕ್ತಿಕ ಗೆಲುವಿಗಿಂತ ಹೆಚ್ಚಾಗಿ ದೇವರಿಗೆ ಸಲ್ಲಿಸಿದ ಧನ್ಯವಾದವಾಗಿತ್ತು ಎಂದು ಸಂಜು ಹೇಳಿದ್ದಾರೆ. ಅದು ಅತ್ಯಂತ ವೈಯಕ್ತಿಕ ಸಂಭ್ರಮವಾಗಿತ್ತು, ಆದರೆ ಎಲ್ಲರ ಗಮನಸೆಳೆಯಿತು. ನಾನು ದೇವರಲ್ಲಿ ತೀವ್ರ ನಂಬಿಕೆ ಉಳ್ಳವನು. ತಂಡಕ್ಕೆ ನೆರವಾಗಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ. ಆ ಅದ್ಭುತ ಕ್ಷಣ ನನ್ನ ಕೊನೆಯುಸಿರಿನವರೆಗೂ ನನ್ನ ನೆನಪಿನಲ್ಲಿರುತ್ತದೆ ಎಂದು ಸಂಜು ಸ್ಮರಿಸಿಕೊಂಡಿದ್ದಾರೆ, (ಏಜೆನ್ಸೀಸ್).