ವಿಶ್ವಕಪ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಸಂಜು ಗಳಿಸಿದರು ಮತ್ತು 'ಸರಣಿಯ ಆಟಗಾರ' ಪ್ರಶಸ್ತಿಗೆ ಭಾಜನರಾದರು. ಇತ್ತೀಚೆಗೆ ಸಂಜು, ಇಂಡಿಯಾ ಟುಡೇ ಕಾನ್ಕ್ಲೇವ್ಗೆ ಹಾಜರಾಗಿದ್ದರು. ಈ ವೇಳೆ ರ್ಯಾಪಿಡ್ ಫೈರ್ ಸೆಷನ್‌ನಲ್ಲಿ, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಸಂಜು ಹಂಚಿಕೊಂಡರು. ಬಾಲ್ಯದಿಂದಲೂ ತಮಗೆ ಸ್ಫೂರ್ತಿ ನೀಡಿದ ಆಟಗಾರ ಯಾರು? ಐಪಿಎಲ್‌ನಲ್ಲಿ ತಮ್ಮ ಮೊದಲ ಸಿಕ್ಸರ್ ಹೊಡೆದದ್ದು ಯಾವಾಗ? ಮುಂತಾದ ಪ್ರಶ್ನೆಗಳಿಗೆ ಸಂಜು, ಬಹಳ ಮೋಜಿನ ಉತ್ತರಗಳನ್ನು ನೀಡಿದರು.