ಸಂಜೀವ್ ಗೋಯಂಕಾ ಒಬ್ಬ ಜೋಕರ್: ಇವನಿಂದಲೇ ಪಂತ್​ ನಾಯಕತ್ವ ಬಿಟ್ಟಿದ್ದು; LSG ಮಾಲೀಕನ ವಿರುದ್ಧ ಲಲಿತ್ ಮೋದಿ ಆಕ್ರೋಶ! Lalit Modi on Sanjiv Goenka

ಸಂಜೀವ್​ ಗೋಯಂಕಾ ವಿರುದ್ಧ ಹರಿಹಾಯ್ದ ಲಲಿತ್​ ಮೋದಿ
ಸಂಜೀವ್​ ಗೋಯಂಕಾ ವಿರುದ್ಧ ಹರಿಹಾಯ್ದ ಲಲಿತ್​ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ಸಂಜೀವ್​ ಗೋಯಂಕಾ ಒಬ್ಬ ಜೋಕರ್​
  • ಇವನ ಕಾಟ ತಡೆಯದೆ ಪಂತ್​ ನಾಯಕತ್ವಕ್ಕೆ ವಿದಾಯ ಹೇಳಿದ್ದು
  • ಐಪಿಎಲ್​ನಲ್ಲಿ ನೂತನ ನಿಯಮಗಳ ಅಗತ್ಯವಿದೆ
  • ಸಂಜೀವ್​ ಗೋಯಂಕಾ ವಿರುದ್ಧ ಹರಿಹಾಯ್ದ ಲಲಿತ್​ ಮೋದಿ
ಐಪಿಎಲ್​: ನಾಳೆ (ಭಾನುವಾರ, ಮೇ.31) ಐಪಿಎಲ್​ 2026 ಕ್ಕೆ ತೆರೆ ಬೀಳಲಿದ್ದು, ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಗುಜರಾತ್​ ಟೈಟಾನ್ಸ್​ ತಂಡಗಳು ಟ್ರೋಫಿಗಾಗಿ ಕಾಳಗ ನಡೆಸಲಿವೆ.
ಐಪಿಎಲ್​ ಸೀಸನ್​ ಮುಗಿಯುತ್ತಾ ಬಂದಂತೆ ಲಖನೌ ಸೂಪರ್​ ಜೈಂಟ್ಸ್​ ತಂಡದಿಂದ ಸ್ಪೋಟಕ ಹೇಳಿಕೆಯೊಂದು ಹೊರಬಂದಿದ್ದು, ತಂಡದ ನಾಯಕತ್ವದಿಂದ ರಿಷಭ್​ ಪಂತ್​ ಕೆಳಗಿಳಿಯಲಿದ್ದಾರೆ ಎಂದು ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಫ್ರಾಂಚೈಸಿ ಮಾಹಿತಿಯನ್ನು ಹಂಚಿಕೊಂಡಿದೆ.
ಈಗ ಈ ಸುದ್ದಿಗೆ ಪ್ರತಿಕ್ರಿಸಿರುವ ಐಪಿಎಲ್​ ಸ್ಥಾಪಕರಲ್ಲಿ ಒಬ್ಬರಾಗಿದ್ದ ಲಲಿತ್​ ಮೋದಿ (Lalit Modi on Sanjiv Goenka), ರಿಷಭ್​ ಪಂತ್​ ನಾಯಕತ್ವದಿಂದ ಕೆಳಗಿಳಿಯಲು ತಂಡದ ಮಾಲೀಕ ಸಂಜೀವ್​ ಗೋಯಂಕಾ ನೇರ ಕಾರಣ ಎಂದು ಆರೋಪಿಸಿದ್ದಾರೆ.

ಸಂಜೀವ್ ಗೋಯಂಕಾ ಒಬ್ಬ ಜೋಕರ್​!

ರಿಷಭ್​ ಪಂತ್​ ನಾಯಕತ್ವದಿಂದ ಹೊರಬಂದಿರುವ ವಿಷಯದ ಬಗ್ಗೆ ಮಾತನಾಡಿರುವ ಲಲಿತ್​ ಮೋದಿ, ಲಖನೌ ತಂಡದಿಂದ ರಿಷಭ್ ಹೊರಬರಲು, ಮಾಲೀಕ ಸಂಜೀವ್​ ಗೋಯಂಕಾನೇ ಕಾರಣ.
ಯಾವ ಆಟಗಾರನೇ ಆಗಿರಲಿ ಅವನು ಸಾರ್ವಜನಿಕ ನಿಂದನೆಯನ್ನು ಸಹಿಸಿಕೊಳ್ಳುವುದಿಲ್ಲ. ಈ ಗೋಯಂಕಾ ಆಟಗಾರನಿಗಿಂತ ಹೆಚ್ಚು ತಾನೇ ಮೈದಾನದಲ್ಲಿ ನಿಂತಿರುತ್ತಿದ್ದ, ಆಟಗಾರರಿಗೆ ಬಹಳ ಹಿಂಸೆ ನೀಡಿದ ಪರಿಣಾಮವಾಗಿ ಈ ಸೀಸನ್​ ಬಹಳ ಕಳಪೆಯಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ.
ಸಂಜೀವ್​ ಗೋಯಂಕಾ ಒಬ್ಬ ಜೋಕರ್​, ಅವನು ರಿಷಭ್​ ಪಂತ್​ನನ್ನು 2025 ರಲ್ಲಿ 27 ಕೋಟಿಗೆ ಖರೀದಿ ಮಾಡಿ ಮುಂದಿನ 7-8 ವರ್ಷ ಇವನೇ ನನ್ನ ತಂಡದ ನಾಯಕನಾಗಿರುತ್ತಾನೆ ಎಂದು ಬಡಾಯಿ ಬಿಡುತ್ತಿದ್ದ. ಆದರೆ ಕೇವಲ ಎರಡು ಸೀಸನ್​ ಕೂಡ ಇವನ ತಂಡದಲ್ಲಿ ಆಟಗಾರರು ಊಳಿಯಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಐಪಿಎಲ್​ನಲ್ಲಿ ನೂತನ ನಿಯಮಗಳ ಅಗತ್ಯವಿದೆ!

ಅದೇ ರೀತಿ ಐಪಿಎಲ್​ನಲ್ಲಿ ಹೊಸ ನಿಯಮಗಳ ಅಗತ್ಯತೆ ಬಗ್ಗೆ ಮಾತನಾಡಿರುವ ಲಲಿತ್​ ಮೋದಿ, ಒಬ್ಬ ಆಟಗಾರ ಒಂದು ತಂಡಕ್ಕೆ ಮಾರಾಟವಾದ ನಂತರ ಆತ ಅಲ್ಲಿ ಏನೇ ತೊಂದರೆ ಅನುಭವಿಸಿದರೂ ಆಟವಾಡಲೇ ಬೇಕಾಗುತ್ತದೆ. ಇದನ್ನು ನಾವು ತಪ್ಪಿಸಬೇಕಿದೆ, ಇಲ್ಲದಿದ್ದರೆ ಆಟಗಾರರ ಮನೋಸ್ಥಿತಿ ಹಾಳಾಗುತ್ತದೆ.
ಹಾಗೆಯೇ ತಂಡದ ಮಾಲೀಕರು ಪಂದ್ಯವಾಳಿಯ ನಂತರ ಮಾತ್ರ ಮೈದಾನವನ್ನು ಪ್ರವೇಶಿಸಬೇಕು, ಹಾಗೂ ಆಟಗಾರರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ನಿಲ್ಲಿಸಬೇಕು. ಪಂದ್ಯದ ನಡುವೆ ಮಾಲೀಕ ಬೌಂಡರಿ ಗೆರೆಯಲ್ಲಿ ನಿಂತು ತಂಡದೊಂದಿವೆ ಸಂವಹನ ನಡೆಸುವುದನ್ನು ನಿಲ್ಲಿಸಬೇಕೆಂದು ಲಲಿತ್​ ಮೋದಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಲಖನೌ ನಾಯಕತ್ವ ಬಿಟ್ಟ ಪಂತ್​!

ಶುಕ್ರವಾರ (ಮೇ.29) ಲಖನೌ ಸೂಪರ್​ ಜೈಂಟ್ಸ್​ ತಂಡದ ನಾಯಕತ್ವ ಸ್ಥಾನದಿಂದ ರಿಷಭ್​ ಪಂತ್​ ಕೆಳಗಿಳಿಯಲಿದ್ದಾರೆಂದು ಎಕ್ಸ್​ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಈ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ರಿಷಭ್ ಪಂತ ಜವಾಬ್ದಾರಿ ಹೊತ್ತು ಕ್ಯಾಪ್ಟನ್ಸಿ ಸ್ಥಾನದಿಂದ ಹೊರಬರುವ ಕುರಿತು ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ಪೋಸ್ಟ್ ಮಾಡಲಾಗಿತ್ತು. ಈ ಭಾರಿಯ ಐಪಿಎಲ್​ನಲ್ಲಿ 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ ಕೇಲವ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಲಖನೌ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಅಲಂಕರಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net