ಮಾರ್ಚ್​ ತಿಂಗಳ ಐಸಿಸಿ ಪ್ರಶಸ್ತಿ ರೇಸ್​ನಲ್ಲಿ ಬುಮ್ರಾ, ಸ್ಯಾಮ್ಸನ್​

ಮಾರ್ಚ್​ ತಿಂಗಳ ಐಸಿಸಿ ಪ್ರಶಸ್ತಿ ರೇಸ್​ನಲ್ಲಿ ಬುಮ್ರಾ, ಸ್ಯಾಮ್ಸನ್​
ಮಾರ್ಚ್​ ತಿಂಗಳ ಐಸಿಸಿ ಪ್ರಶಸ್ತಿ ರೇಸ್​ನಲ್ಲಿ ಬುಮ್ರಾ, ಸ್ಯಾಮ್ಸನ್​
Published on
ದುಬೈ: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಸತತ 2ನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿಕೆಟ್​ ಕೀಪರ್​-ಆರಂಭಿಕ ಸಂಜು ಸ್ಯಾಮ್ಸನ್​ ಮತ್ತು ವೇಗಿ ಜಸ್​ಪ್ರೀತ್​ ಬುಮ್ರಾ ಐಸಿಸಿಯ ಮಾರ್ಚ್​ ತಿಂಗಳ ಆಟಗಾರ ಪ್ರಶಸ್ತಿ (ICC player of the month award) ರೇಸ್​ನಲ್ಲಿದ್ದಾರೆ. ಇವರಿಬ್ಬರು ದಕ್ಷಿಣ ಆಫ್ರಿಕಾದ ಬ್ಯಾಟರ್​ ಕಾನರ್​ ಎಸ್ಟರ್​ಹುಯಿಜೆನ್​ ಜತೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಸ್ಯಾಮ್ಸನ್​ ಟಿ20 ವಿಶ್ವಕಪ್​ನಲ್ಲಿ ಕಡೇ ಸೂಪರ್​&8 ಪಂದ್ಯದಲ್ಲಿ ವಿಂಡೀಸ್​ ಎದುರು ಅಜೇಯ 97, ಸೆಮೀಸ್​ನಲ್ಲಿ ಇಂಗ್ಲೆಂಡ್​ ಎದುರು 89 ಮತ್ತು ಫೈನಲ್​ನಲ್ಲಿ ನ್ಯೂಜಿಲೆಂಡ್​ ಎದುರು ಮತ್ತೆ 89 ರನ್​ ಸಿಡಿಸಿ ಮಿಂಚಿದ್ದರು. ಬುಮ್ರಾ ಇವೇ 3 ಪಂದ್ಯಗಳಲ್ಲಿ 7 ವಿಕೆಟ್​ ಕಬಳಿಸಿದ್ದರು. ಅದರಲ್ಲೂ ಫೈನಲ್​ನಲ್ಲಿ ಕಿವೀಸ್​ ಎದುರು 15 ರನ್​ಗಳಿಗೆ 4 ವಿಕೆಟ್​ ಕಬಳಿಸಿ ಗೆಲುವಿಗೆ ನೆರವಾಗಿದ್ದರು.

ಎಸ್ಟರ್​ಹುಯಿಜೆನ್​ ಟಿ20 ವಿಶ್ವಕಪ್​ ಬೆನ್ನಲ್ಲೇ ಕಿವೀಸ್​ನಲ್ಲಿ ನಡೆದ ಟಿ20 ಸರಣಿಯಲ್ಲಿ 50ರ ಸರಾಸರಿಯಲ್ಲಿ 200 ರನ್​ ಸಿಡಿಸಿ ಗಮನಸೆಳೆದಿದ್ದರು. ಮಹಿಳೆಯರ ವಿಭಾಗದಲ್ಲಿ ನ್ಯೂಜಿಲೆಂಡ್​ನ ಮೆಲೀ ಕೆರ್​, ದಕ್ಷಿಣ ಆಫ್ರಿಕಾದ ಅಯಬೊಂಗಾ ಖಾಕಾ ಮತ್ತು ಆಸ್ಟ್ರೆಲಿಯಾದ ಬೆತ್​ ಮೂನಿ ನಾಮನಿರ್ದೇಶನಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net