ಅಂದಹಾಗೆ, ಸ್ಯಾಮ್ ಬಿಲ್ಲಿಂಗ್ಸ್ ಐಪಿಎಲ್ನಲ್ಲಿ ಕೋಲ್ಕತ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಅವರು 2016ರ ಐಪಿಎಲ್ನಲ್ಲಿ ಪಾದಾರ್ಪಣೆ ಮಾಡಿದರು. 2022 ರಲ್ಲಿ ಸ್ವಲ್ಪ ಸಮಯದವರೆಗೆ ಐಪಿಎಲ್ ನಿಂದ ದೂರ ಉಳಿದಿದ್ದರು. ಈ ವೇಳೆ ಅವರು ದೀರ್ಘ-ರೂಪದ ಕ್ರಿಕೆಟ್ ಮೇಲೆ ಗಮನಹರಿಸಿದರು. ಸ್ಯಾಮ್ ಬಿಲ್ಲಿಂಗ್ಸ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 30 ಪಂದ್ಯಗಳಲ್ಲಿ 503 ರನ್ ಗಳಿಸಿದ್ದಾರೆ. ವಿಶೇಷವಾಗಿ 2018 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವಾಗ, ಅವರು ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ ನೈಟ್ ರೈಡರ್ಸ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು. ಆ ಪಂದ್ಯದಲ್ಲಿ, ಸಿಎಸ್ಕೆ, ಕೆಕೆಆರ್ ಅನ್ನು ಸೋಲಿಸಿತು. 2022 ರಿಂದ ಐಪಿಎಲ್ನಿಂದ ಹಿಂದೆ ಸರಿದರು. ಪ್ರಸ್ತುತ, ಸ್ಯಾಮ್ ಬಿಲ್ಲಿಂಗ್ಸ್ ಪಾಕಿಸ್ತಾನ ಕ್ರಿಕೆಟ್ ಲೀಗ್ (ಪಿಎಸ್ಎಲ್) ನಲ್ಲಿ ಆಡುತ್ತಿದ್ದಾರೆ.