ಆಗ ಸಚಿನ್​ ಶಾಂಪೇನ್​ ಕುಡಿಯಲು ಕಾದಿದ್ದರು; ಈಗ ಸೂರ್ಯವಂಶಿ ಕಾರು ಬಿಡಲು ಕಾಯಬೇಕು!

ಆಗ ಸಚಿನ್​ ಶಾಂಪೇನ್​ ಕುಡಿಯಲು ಕಾದಿದ್ದರು; ಈಗ ಸೂರ್ಯವಂಶಿ ಕಾರು ಬಿಡಲು ಕಾಯಬೇಕು!
ಆಗ ಸಚಿನ್​ ಶಾಂಪೇನ್​ ಕುಡಿಯಲು ಕಾದಿದ್ದರು; ಈಗ ಸೂರ್ಯವಂಶಿ ಕಾರು ಬಿಡಲು ಕಾಯಬೇಕು!
Published on
ನವದೆಹಲಿ: ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡುಲ್ಕರ್​ (Sachin Tendulkar) 1990ರ ಇಂಗ್ಲೆಂಡ್​ ಪ್ರವಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಾಗ ಉಡುಗೊರೆಯಾಗಿ ಶಾಂಪೇನ್​ ಬಾಟಲಿಯೊಂದನ್ನು ಪಡೆದಿದ್ದರು. ಆದರೆ ಆಗ ಅವರಿನ್ನೂ ಅಪ್ರಾಪ್ತರಾಗಿದ್ದ ಕಾರಣ ಅದನ್ನು ಕುಡಿಯುವಂತಿರಲಿಲ್ಲ. ಕೊನೆಗೆ 8 ವರ್ಷಗಳ ಬಳಿಕ 1998ರಲ್ಲಿ ಮಗಳ ಮೊದಲ ಜನ್ಮದಿನದಂದು ಅವರು ಆ ಶಾಂಪೇನ್​ ಬಾಟಲಿಯನ್ನು ಕೊನೆಗೂ ಓಪನ್​ ಮಾಡಿದ್ದರು. ಇದೀಗ ಭಾರತೀಯ ಕ್ರಿಕೆಟ್​ನ ಹೊಸ ಬ್ಯಾಟಿಂಗ್​ ಸೆನ್ಸೇಶನ್​ ವೈಭವ್​ ಸೂರ್ಯವಂಶಿ (Vaibhav Sooryavanshi) ಕೂಡ ಇಂಥದ್ದೇ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಕಳೆದ ಐಪಿಎಲ್​ನಲ್ಲಿ ರನ್​ಮಳೆ ಹರಿಸಿ ಆರೆಂಜ್​ ಕ್ಯಾಪ್​, ಸರಣಿಶ್ರೇಷ್ಠ, ಉದಯೋನ್ಮುಖ ಆಟಗಾರ ಪ್ರಶಸ್ತಿಗಳನ್ನು ಗೆದ್ದ ಅವರಿಗೆ 12 ಲಕ್ಷ ರೂ. ಮೌಲ್ಯದ ಬ್ರ್ಯಾಂಡ್​-ನ್ಯೂ ಟಾಟಾ ಸಿಯೇರಾ ಎಸ್​ಯುವಿ ಉಡುಗೊರೆಯಾಗಿ ಲಭಿಸಿತ್ತು. ಆದರೆ 15 ವರ್ಷದ ಸೂರ್ಯವಂಶಿ ಡೆವಿಂಗ್​ ಲೈಸೆನ್ಸ್​ ಪಡೆಯಲು 18ನೇ ವಯಸ್ಸಿನವರೆಗೆ ಕಾಯಬೇಕಿದೆ ಮತ್ತು ಅಲ್ಲಿಯವರೆಗೆ ಅವರು ಆಟಿಕೆಯ ರಿಮೋಟ್​ ಕಂಟ್ರೋಲ್​ ಕಾರನ್ನಷ್ಟೇ ಬಿಡಬಹುದಾಗಿದೆ.

ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿರುವ ಸೂರ್ಯವಂಶಿ, "3 ವರ್ಷಗಳ ವರೆಗೆ ಕಾಯುವೆ. ಲೈಸೆನ್ಸ್​ ಸಿಕ್ಕ ಬಳಿಕ ಕಾರು ಚಲಾಯಿಸುವೆ. ಅಲ್ಲಿಯವರೆಗೆ ಅಪ್ಪ ಕಾರು ಬಿಡುವರು, ನಾನು ಪಕ್ಕದಲ್ಲೇ ಕುಳಿತುಕೊಳ್ಳುವೆ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net