ಗೆಲುವಿನ ಸೀಕ್ರೆಟ್​ ಬಿಚ್ಚಿಟ್ಟ ಸಚಿನ್​ ತೆಂಡೂಲ್ಕರ್​; ಮ್ಯಾಚ್​ ಇದ್ದರೂ ಇಲ್ಲದಿದ್ದರೂ ಈ ಕೆಲಸ ಎಂದಿಗೂ ಮರೆಯುತ್ತಿರಲಿಲ್ಲವಂತೆ..Sachin Tendulkar

Sachin Tendulkar pre-match morning ritual
Sachin Tendulkar pre-match morning ritual
Published on

ಪ್ರಮುಖ ಮುಖ್ಯಾಂಶಗಳು

  • ತಾವೇ ನಿತ್ಯ ಟೀ ಮಾಡಿಕೊಳ್ಳೋದು ಎಂದು ವಿಡಿಯೋ ಹಂಚಿಕೊಂಡ ಸಚಿನ್​ ತೆಂಡೂಲ್ಕರ್​​
  • ಪಂದ್ಯಕ್ಕೆ ಸಿದ್ಧವಾಗುವ ಮುನ್ನ ಕೋಣೆಗೆ ಯಾರೂ ಪ್ರವೇಶಿಸಬಾರದು ಎಂದು ರೀಲ್ಸ್​ನಲ್ಲಿ ಉಲ್ಲೇಖ
  • ನನ್ನ ಕೆಲಸ ನಾನೇ ಮಾಡಿಕೊಳ್ಳೋದು, ಚಹಾ ತಯಾರಿಸೋದು ಮನಸ್ಸಿಗೆ ನೆಮ್ಮದಿ ಕೊಡತ್ತೆ ಎಂದ ಸಚಿನ್
Sachin Tendulkar pre-match morning ritual: ಕ್ರಿಕೆಟ್​​ ಜಗತ್ತಿನ ದಂತಕತೆ ಸಚಿನ್​ ತೆಂಡೂಲ್ಕರ್​​ ಅವರು, ಈ ಹಿಂದೆ ಪ್ಲೇ ಗ್ರೌಂಡ್​ಗೆ ಕಾಲಿಡುವ ಮುನ್ನ ಹಾಗೂ ಇಂದಿನ ದಿನದವರೆಗೂ ಬೆಳಗ್ಗೆ ಎದ್ದ ಕೂಡಲೇ ತಮ್ಮ ಚಹಾವನ್ನು ತಾವೇ ತಯಾರಿಸಕೊಂಡು ಕುಡಿಯುವ ಬಗ್ಗೆ ಹಾಗೂ ಇದು ಹೇಗೆ ಅವರಿಗೆ ಪ್ರಶಾಂತತೆ ನೀಡುತ್ತದೆ ಎನ್ನುವ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ ಅನ್ನು ಹಂಚಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್​​ ಮ್ಯಾಚ್​ಗಳಲ್ಲಿ ಶತಕದ ದಾಖಲೆ ಬರೆದ ಸಚಿನ್​ ತೆಂಡೂಲ್ಕರ್​ ಅವರು ತಮ್ಮ ಯಶಸ್ಸಿನ ಹಿಂದಿನ ಸೀಕ್ರೆಟ್​ ಅನ್ನು ರಿವೀಲ್​ ಮಾಡಿದ್ದಾರೆ.ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ ಮಾಡಿದ ಪರಿ, ಯಶಸ್ವಿ ಕರಿಯರ್​​ ಭಾರತಕ್ಕೆ ತಂದುಕೊಟ್ಟ ಗೆಲುವು ಹಾಗೂ ಪ್ರತಿ ಪಂದ್ಯದಲ್ಲು ತಮಗೆ ಸಿಗುತ್ತಿದ್ದ ಗೆಲುವಿಗೆ ಕಾರಣ ಏನು ಎನ್ನುವುದಕ್ಕೆ ಉತ್ತರ ತಾವೇ ಗ್ರೀನ್​ ಟೀ ತಯಾರಿ ಮಾಡುವುದು ಎಂದಿದ್ದಾರೆ.

ಸಚಿನ್​ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

ತಾವೇ ಬಿಸಿನೀರಿಗೆ ಟೀ ಬ್ಯಾಗ್ ಹಾಕಿ ಚಹಾ ಸಿದ್ಧಪಡಿಸುತ್ತಾ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ. ನಾನು ನನ್ನ ಆಟದ ದಿನಗಳಲ್ಲೂ ಸಹ ಪ್ರತಿದಿನ ಬೆಳಗ್ಗೆ ಇದೇ ರೀತಿ ಮಾಡುತ್ತಿದ್ದೆ. ನನ್ನ ಕೋಣೆಯಲ್ಲಿ ನಾನೇ ಸ್ವತಃ ಚಹಾ ಸಿದ್ಧಪಡಿಸುತ್ತಿದ್ದೆ. ಯಾರಾದರೂ ಬಂದು ನನಗೆ ಚಹಾ ಸರ್ವ್ ಮಾಡುವುದು ನನಗಿಷ್ಟವಿರಲಿಲ್ಲ. ಪಂದ್ಯ ಆರಂಭವಾಗುವ ಮುನ್ನ ನನ್ನ ಕೋಣೆಗೆ ಬೇರೆ ಯಾರೂ ಪ್ರವೇಶಿಸುವುದನ್ನು ನಾನು ಬಯಸುತ್ತಿರಲಿಲ್ಲ. ಅದಕ್ಕಾಗಿಯೇ ನಾನು ನನ್ನ ಸ್ವಂತ ಚಹಾವನ್ನು ತಾನೇ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಪಂದ್ಯದಿಂದ ನಿವೃತ್ತಿ ಪಡೆದುಕೊಂಡ ನಂತರವೂ ಮನೆಯಲ್ಲಿ ನನಗೆ ಇದೇ ಅಭ್ಯಾಸ ಮುಂದುವರಿದಿದೆ. ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಇದು ನನಗೆ ಮನಸ್ಸಿಗೆ ಶಾಂತಿ ಮತ್ತು ಆನಂದವನ್ನು ನೀಡುತ್ತದೆ.
"ಹಲವರು ಊಹಿಸುವುದಕ್ಕಿಂತಲೂ ಹೆಚ್ಚಿನ ಇನ್ನಿಂಗ್ಸ್‌ಗಳ ಭಾಗವಾಗಿ ಈ ಒಂದು ಕಪ್ ಚಹಾ ನನ್ನೊಂದಿಗಿದೆ" ಎಂಬ ಶೀರ್ಷಿಕೆ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ 100 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿ ನಿವೃತ್ತರಾಗಿರುವ ಸಚಿನ್ ಅವರ ಈ ಸರಳ ಹವ್ಯಾಸ ಅಭಿಮಾನಿಗಳ ಮನ ಗೆದ್ದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net