ಸಚಿನ್ ಕ್ರಿಕೆಟ್ ದೇವರು, ವೈಭವ್ ದೇವರ ಮಗ... ವಂಡರ್​ ಕಿಡ್​ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಹೇಳಿದ್ದೇನು? Vaibhav Suryavanshi and Sachin Tendulkar

ಸಚಿನ್​ ಕ್ರಿಕೆಟ್​ ದೇವರು; ವೈಭವ್​ ದೇವರ ಮಗ: ಕೆ. ಶ್ರೀಕಾಂತ್​
ಸಚಿನ್​ ಕ್ರಿಕೆಟ್​ ದೇವರು; ವೈಭವ್​ ದೇವರ ಮಗ: ಕೆ. ಶ್ರೀಕಾಂತ್​
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ ಆರೆಂಜ್ ಕ್ಯಾಪ್ ವಿನ್ನರ್ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆ
  • ಟೀಮ್ ಇಂಡಿಯಾಗೆ ಆಯ್ಕೆಯಾದ ವೈಭವ್ ಸೂರ್ಯವಂಶಿಯನ್ನು ಸಚಿನ್‌ ತೆಂಡೂಲ್ಕರ್​ಗೆ ಹೋಲಿಕೆ
  • ಸಚಿನ್​ ಕ್ರಿಕೆಟ್​ ದೇವರು; ವೈಭವ್​ ದೇವರ ಮಗ: ಕೆ. ಶ್ರೀಕಾಂತ್​
ಕ್ರಿಕೆಟ್​: ಈ ಭಾರಿಯ ಐಪಿಎಲ್​ನಲ್ಲಿ ಎಲ್ಲರ ಬಾಯಲ್ಲಿ ತನ್ನ ಹೆಸರು ಮೂಡುವಂತೆ ಮಾಡಿದ ಆಟಗಾರನೆಂದರೆ ಅದು ವೈಭವ್​ ಸೂರ್ಯವಂಶಿ ಎಂದು ಹೇಳಬಹುದು.
ರಾಜಸ್ಥಾನ್​ ರಾಯಲ್ಸ್ ತಂಡದ ಓಪನಿಂಗ್​ ಬ್ಯಾಟರ್​​ ಆಗಿ ಕಣಕ್ಕಿಳಿದು, ಖ್ಯಾತನಾಮ ಬೌಲರ್​ಗಳನ್ನು ಮನಸೋ ಇಚ್ಛೆ ತಳಿಸಿ ರನ್​ಗಳ ಕೋಟೆಯನ್ನೇ ಕಟ್ಟಿದನು. ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಿಸುವ ಮೂಲಕ ಆರೆಂಜ್​ ಕ್ಯಾಪ್​ ಸಹಿತ ಇತರ ನಾಲ್ಕು ಪ್ರಶಸ್ತಿಗಳಿಗೆ ವೈಭವ್​ ಭಾಜನರಾಗಿದ್ದ.
ಅಂತೆಯೇ ಐಪಿಎಲ್​ನಲ್ಲಿ ಅಮೋಗ ಪ್ರದರ್ಶನ ನೀಡಿದ ಹಿನ್ನಲೆ, ವೈಭವ್​ ಸೂರ್ಯವಂಶಿ ಭಾರತ ಪುರುಷರ ತಂಡಕ್ಕೆ ಸಹ ಆಯ್ಕೆಯಾಗಿದ್ದಾನೆ. ಈ ಮೂಲಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಮ್ಮೆಗೆ ಪಾತ್ರನಾಗಿದ್ದಾನೆ.

ಸಚಿನ್​ ಕ್ರಿಕೆಟ್​ ದೇವರು; ವೈಭವ್​ ದೇವರ ಮಗ!

ವೈಭವ್​ ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಅನೇಕರು ವೈಭವ್​ನನ್ನು, ಸಚಿನ್​ ತೆಂಡೂಲ್ಕರ್​​ (Vaibhav Suryavanshi and Sachin Tendulkar) ಜೊತೆ ಹೋಲಿಸಲು ಪ್ರಾರಂಭಿಸಿದ್ದಾರೆ. ಆದರೆ ಈ ಹೋಲಿಕೆ ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್​ ವಿರೋಧ ವ್ಯಕ್ತ ಪಡಿಸಿದ್ದಾರೆ.
ಸಚಿನ್​ ಮತ್ತು ವೈಭವ್​ ನಡುವಿನ ಹೋಲಿಕೆ ಮಾಡಲೇ ಬಾರದು. ಜಗತ್ತಿಗೆ ಒಬ್ಬನೇ ಸಚಿನ್​ ತೆಂಡೂಲ್ಕರ್​ ಇರುವುದು, ಅದಕ್ಕೆ ಅವನನ್ನು ಕ್ರಿಕೆಟ್​ ದೇವರೆಂದು ಕರೆಯುವುದು. ನಾವು ವೈಭವ್​ನನ್ನು ದೇವರ ಮಗನೆಂದು ಹೇಳಬಹುದೆಂದು ಅವರು ಹೇಳಿದ್ದಾರೆ. ಹಾಗೆಯೇ ಸಚಿನ್​ ಮತ್ತು ವೈಭವ್​ ಇಬ್ಬರು ಬೇರೆ ತಲಮಾರಿನ ಆಟಗಾರರು, ಹೀಗಾಗಿ ಇವರಿಬ್ಬರ ಹೋಲಿಕೆಗೆ ಯಾವುದೇ ಅರ್ಥವಿಲ್ಲ, ತರ್ಕವಿಲ್ಲ ಎಂದು ಶ್ರೀಕಾಂತ್​ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವೈಭವ್​ಗೆ ಉತ್ತಮ ಭವಿಷ್ಯವಿದೆ!

ಈ ಭಾರಿಯ ಐಪಿಎಲ್​ನಲ್ಲಿ ಮತ್ತು ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ವೈಭವ್​ ಉತ್ತಮ ಪ್ರದರ್ಶನ ನೀಡಿದ್ದಾನೆ. ಅವನಿಗೆ ರನ್​ಗಳಿಸುವ ಹಂಬಲವಿದೆ, ಅವನ ಶಾಟ್​ ಆಯ್ಕೆ ಮತ್ತು ಕೌಶಲ್ಯ ತುಂಬಾ ಚೆನ್ನಾಗಿದೆ. ಇವನ ಆಟ ಹೀಗೆ ಮುಂದುವರಿದರೆ ಕ್ರಿಕೆಟ್​ನಲ್ಲಿ ವೈಭವ್​ ಸೂರ್ಯವಂಶಿಗೆ ಉತ್ತಮ ಭವಿಷ್ಯವಿದೆ ಎಂದು ಕೃಷ್ಣಮಾಚಾರಿ ಶ್ರೀಕಾಂತ್​ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net