ಸಿಎಸ್‌ಕೆ ಫ್ಯಾನ್ಸ್‌ಗೆ ಶಾಕ್: 14.20 ಕೋಟಿಯ ಸ್ಟಾರ್ ಆಟಗಾರನನ್ನೇ ಕೈಬಿಟ್ಟ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್! IPL 2026
(ಚಿತ್ರ X)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
IPL 2026 ರ ಕ್ರಿಕೆಟ್ ಲೋಕದ ಹಬ್ಬಕ್ಕೆ ಇಡೀ ದೇಶವೇ ಸಜ್ಜಾಗುತ್ತಿರುವ ಬೆನ್ನಲ್ಲೇ, ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿಕೆ
ಚೆನ್ನೈ ತಂಡದೊಂದಿಗೆ ಪ್ರಾರಂಭದಿಂದಲೂ ನಿಕಟ ಸಂಬಂಧ ಹೊಂದಿರುವ ಶ್ರೀಕಾಂತ್
ಸಿಎಸ್‌ಕೆ ತಂಡದ ದುಬಾರಿ ಆಟಗಾರರಲ್ಲಿ ಒಬ್ಬರಾದ ಕಾರ್ತಿಕ್ ಶರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದೆ
IPL 2026: 2026ರ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟ್ ಲೋಕದ ಹಬ್ಬಕ್ಕೆ ಇಡೀ ದೇಶವೇ ಸಜ್ಜಾಗುತ್ತಿರುವ ಬೆನ್ನಲ್ಲೇ, ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರು ತಮ್ಮ ನೆಚ್ಚಿನ ತಂಡಗಳ ಸಂಯೋಜನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಪೈಕಿ ಭಾರತ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಹೇಳಿಕೆ ಈಗ ಭಾರೀ ಸಂಚಲನ ಮೂಡಿಸಿದೆ.
ಚೆನ್ನೈ ತಂಡದೊಂದಿಗೆ ಪ್ರಾರಂಭದಿಂದಲೂ ನಿಕಟ ಸಂಬಂಧ ಹೊಂದಿರುವ ಶ್ರೀಕಾಂತ್, ಈ ಬಾರಿ ಸಿಎಸ್‌ಕೆ ತಂಡದ ದುಬಾರಿ ಆಟಗಾರರಲ್ಲಿ ಒಬ್ಬರಾದ ಕಾರ್ತಿಕ್ ಶರ್ಮಾ ಅವರನ್ನು ತಮ್ಮ ತಂಡದಿಂದ ಕೈಬಿಡಲಾಗಿದೆ ಎಂದು ಹೇಳಿದ್ದು, ಸಧ್ಯ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ.
ಕಳೆದ ಹರಾಜಿನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡವು ಬರೋಬ್ಬರಿ 14.20 ಕೋಟಿ ರೂ. ನೀಡಿ ಕಾರ್ತಿಕ್ ಶರ್ಮಾ ಪ್ಲೇಯಿಂಗ್ XI ನಿಂದ ಖರೀದಿಸಿದರು.
ಶ್ರೀಕಾಂತ್ ಭಾರತದ ಟಿ20 ವಿಶ್ವಕಪ್ 2026ರ ವಿಜೇತ ಸಂಜು ಸ್ಯಾಮ್ಸನ್ ಮತ್ತು 2026 ರ ಯು19 ವಿಶ್ವಕಪ್ ವಿಜೇತ ನಾಯಕ ಆಯುಷ್ ಮ್ಹಾತ್ರೆ ಅವರನ್ನು ಆರಂಭಿಕ ಆಟಗಾರರಾಗಿ ಆಯ್ಕೆ ಮಾಡಿಕೊಂಡರು. 3 ನೇ ಸ್ಥಾನದಲ್ಲಿ, ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಿದರು.
ಶ್ರೀಕಾಂತ್ 4 ನೇ ಕ್ರಮಾಂಕಕ್ಕೆ ಆಸಕ್ತಿದಾಯಕ ನಿರ್ಧಾರ ತೆಗೆದುಕೊಂಡಿದ್ದು, ಉರ್ವಿಲ್ ಪಟೇಲ್ ಅವರನ್ನು ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಆಯ್ಕೆಮಾಡಿಕೊಂಡರು. ಈ ವೇಳೆ ಕಾರ್ತಿಕ್ ಶರ್ಮಾ ಮತ್ತು ಸರ್ಫರಾಜ್ ಖಾನ್‌ರಂತಹ ಆಟಗಾರರನ್ನು ಹಿಂದಿಕ್ಕಿದರು.
ಶ್ರೀಕಾಂತ್ ಅವರ ತಂಡದಲ್ಲಿ ಉಳಿದ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್, ದುಬೆ ಮತ್ತು ಎಂಎಸ್ ಧೋನಿ ಇದ್ದರು. ನಂತರ 20 ವರ್ಷದ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರನ್ನು ಆಯ್ಕೆ ಮಾಡಿಕೊಂಡರು. ಇವರನ್ನು ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಸಿಎಸ್‌ಕೆ 14.20 ಕೋಟಿ ರೂ.ಗೆ ಖರೀದಿಸಿತು.
ಶ್ರೀಕಾಂತ್ ಸಿಎಸ್‌ಕೆ ಪರ ಆರಂಭಿಕ ವೇಗಿಗಳಾಗಿ ನ್ಯೂಜಿಲೆಂಡ್‌ನ ಅನುಭವಿ ಬೌಲರ್ ಮ್ಯಾಟ್ ಹೆನ್ರಿ ಮತ್ತು ಭಾರತದ ಖಲೀಲ್ ಅಹ್ಮದ್ ಅವರನ್ನು ಆಯ್ಕೆ ಮಾಡಿಕೊಂಡರು. ಜೊತೆಗೆ ಅನ್ಶುಲ್ ಕಾಂಬೋಜ್ ಅವರನ್ನು ಶ್ರೀಕಾಂತ್ ತಮ್ಮ ತಂಡದಲ್ಲಿ ಸೇರಿಸಿಕೊಂಡಿರುವುದು ಅವರ ಪ್ರತಿಭೆಗೆ ಸಂದ ಗೌರವ. ಆದಾಗ್ಯೂ, ಯುವ ಸ್ಪಿನ್ನರ್ ನೂರ್ ಅಹ್ಮದ್ ಸ್ಪಿನ್ ವಿಭಾಗವನ್ನು ನಡೆಸಲು ಜವಬ್ದಾರಿಯನ್ನು ನೀಡಿದ್ದಾರೆ.
ಏತನ್ಮಧ್ಯೆ, ಶ್ರೀಕಾಂತ್ ತಮ್ಮ ಸ್ಪಿನ್ ದಾಳಿಯನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಮಣಿಕಟ್ಟಿನ ಸ್ಪಿನ್ನರ್ ರಾಹುಲ್ ಚಾಹರ್ ಅವರನ್ನು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಯ್ಕೆ ಮಾಡಿಕೊಂಡಿದ್ದು, ಹರಾಜಿನಲ್ಲಿ 5.2 ಕೋಟಿ ರೂ.ಗೆ ಖರೀದಿಸಿದೆ.