ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತ ಜೈಸ್ವಾಲ್, ಆಕರ್ಷಕ ಅರ್ಧಶತಕ (55 ರನ್, 36 ಎಸೆತ) ಬಾರಿಸಿದರು. ಅವರ ಬಳಿಕ ಬಂದ ಧ್ರುವ್ ಜ್ಯುರೆಲ್ (75) ಅವರ ಸ್ಫೋಟಕ ಇನ್ನಿಂಗ್ಸ್ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸುವಲ್ಲಿ ದೊಡ್ಡ ಕೊಡುಗೆ ನೀಡಿತು. ಅಂತಿಮವಾಗಿ, 20 ಓವರ್ಗೆ 6 ವಿಕೆಟ್ ನಷ್ಟಕ್ಕೆ ಆರ್ಆರ್ 210 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಗುಜರಾತ್ ಪಡೆ ಸುಲಭವಾಗಿ ಚೇಸ್ ಮಾಡಲಿದೆಯೇ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್ನಲ್ಲಿ ಕಾದು ನೋಡಬೇಕಿದೆ.