ಇನ್ನು 19ನೇ ಆವೃತ್ತಿಗಾಗಿ ಕಾದು ಕುಳಿತಿರುವ ಕ್ರಿಕೆಟ್ ಪ್ರೇಮಿಗಳಿಗಂತು ವೈಭವ್ ಸೂರ್ಯವಂಶಿ ಮೇಲೆ ದುಪ್ಪಟ್ಟು ನಿರೀಕ್ಷೆಗಳಿವೆ. ಈ ಸಂದರ್ಭದಲ್ಲಿ ಮಾತನಾಡಿದ ಆರ್ಆರ್ ತಂಡದ ನಾಯಕ ರಿಯಾನ್ ಪರಾಗ್, ವೈಭವ್ ಮೇಲೆ ಯಾವುದೇ ಒತ್ತಡವಿಲ್ಲದಂತೆ ನೋಡಿಕೊಳ್ಳುವುದು ನನ್ನ ಕೆಲಸ. ಈ ಬಾರಿ, ಪ್ರಚೋದನೆ ಮತ್ತು ಒತ್ತಡಗಳು ಬರುವುದು ಸಹಜ. ಆದರೆ, ಯಶಸ್ವಿ ಜೈಸ್ವಾಲ್ ಆ ಒತ್ತಡವನ್ನು ತೆಗೆದುಕೊಳ್ಳಲಿದ್ದಾರೆ. ಅವರ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ನಾವು ನೀಡುತ್ತಿದ್ದೇವೆ. ಇಲ್ಲಿ ಸೂರ್ಯವಂಶಿ ಆರಾಮದಾಯಕವಾಗಿ ಆಡಲಿ. ಆದಷ್ಟು, ಆತನನ್ನು ಮೀಡಿಯಾದಿಂದ ದೂರವಿಟ್ಟು, ಪಂದ್ಯವನ್ನು ಎಂಜಾಯ್ ಮಾಡಲು ಬಿಡುತ್ತೇನೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).