ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ವಿಶ್ವ ನಂ. 1 ಪಟ್ಟ ಕಳೆದುಕೊಂಡ ರೋಹಿತ್ ಶರ್ಮ!

ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ವಿಶ್ವ ನಂ. 1 ಪಟ್ಟ ಕಳೆದುಕೊಂಡ ರೋಹಿತ್ ಶರ್ಮ!
ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ವಿಶ್ವ ನಂ. 1 ಪಟ್ಟ ಕಳೆದುಕೊಂಡ ರೋಹಿತ್ ಶರ್ಮ!
Published on
ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್​ ಬ್ಯಾಟರ್​ ರೋಹಿತ್​ ಶರ್ಮ (Rohit Sharma) ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ (ICC Ranking) ವಿಶ್ವ ನಂ. 1 ಪಟ್ಟದಿಂದ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ನ್ಯೂಜಿಲೆಂಡ್​ನ ಡೆರಿಲ್​ ಮಿಚೆಲ್​ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ.

38 ವರ್ಷದ ರೋಹಿತ್​ ಶರ್ಮ ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಭರ್ಜರಿ ನಿರ್ವಹಣೆ ತೋರಿದ ಬೆನ್ನಲ್ಲೇ ಅಗ್ರಸ್ಥಾನಕ್ಕೇರಿದ್ದರು. ಇದೀಗ ಮಿಚೆಲ್​ ಏಕದಿನದಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ ನ್ಯೂಜಿಲೆಂಡ್​ನ 2ನೇ ಬ್ಯಾಟರ್​ ಎನಿಸಿದ್ದಾರೆ. 1979ರಲ್ಲಿ ಗ್ಲೆನ್​ ರ್ಟನರ್​ ಈ ಸಾಧನೆ ಮಾಡಿದ ಮೊದಲ ಕಿವೀಸ್​ ಬ್ಯಾಟರ್​ ಎನಿಸಿದ್ದರು. ನಂತರದಲ್ಲಿ ಮಾರ್ಟಿನ್​ ಕ್ರೋವ್​, ನಾಥನ್​ ಆಸ್ಟಲ್​, ಕೇನ್​ ವಿಲಿಯಮ್ಸನ್​, ಮಾರ್ಟಿನ್​ ಗುಪ್ಟಿಲ್​, ರೋಸ್​ ಟೇಲರ್​ರಂಥ ಕಿವೀಸ್​ ಬ್ಯಾಟರ್​ಗಳು ಅಗ್ರ 5ರೊಳಗೆ ಪ್ರವೇಶಿಸಿದ್ದರೂ, ಅಗ್ರಸ್ಥಾನಕ್ಕೇರಿರಲಿಲ್ಲ. (Cricket)

ಶುಭಮಾನ್​ ಗಿಲ್​ 4, ವಿರಾಟ್​ ಕೊಹ್ಲಿ 5ನೇ ಸ್ಥಾನ ಕಾಯ್ದುಕೊಂಡಿದ್ದರೆ, ಶ್ರೇಯಸ್​ ಅಯ್ಯರ್​ 9ರಿಂದ 8ನೇ ಸ್ಥಾನಕ್ಕೇರಿದ್ದಾರೆ. ಅಗ್ರ 10ರೊಳಗೆ ಒಟ್ಟು ನಾಲ್ವರು ಭಾರತೀಯರು ಸ್ಥಾನ ಉಳಿಸಿಕೊಂಡಿದ್ದಾರೆ.

ಜೈಸ್ವಾಲ್​ ಕುಸಿತ: ಟೆಸ್ಟ್​ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಯಶಸ್ವಿ ಜೈಸ್ವಾಲ್​ 5ರಿಂದ 7ನೇ ಸ್ಥಾನಕ್ಕೆ ಕುಸಿದಿದ್ದರೆ, ಕೋಲ್ಕತ ಟೆಸ್ಟ್​ನಲ್ಲಿ ಗಾಯದಿಂದಾಗಿ ಬ್ಯಾಟಿಂಗ್​ ಮಾಡದ ನಡುವೆಯೂ ಶುಭಮಾನ್​ ಗಿಲ್​ 13ರಿಂದ 11ನೇ ಸ್ಥಾನಕ್ಕೇರಿದ್ದಾರೆ. ರಿಷಭ್​ ಪಂತ್​ 8ರಿಂದ 12ನೇ ಸ್ಥಾನಕ್ಕಿಳಿದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net