ಈ ಮೊದಲು ಏಕದಿನ, ಟಿ20 ಮತ್ತು ಟೆಸ್ಟ್ ಸೇರಿದಂತೆ ಒಟ್ಟು ಮೂರು ಫಾರ್ಮೆಟ್ಗಳಲ್ಲಿ ಆಡುವ ಸ್ಟಾರ್ ಕ್ರಿಕೆಟಿಗರನ್ನು ಎ+ ವರ್ಗದಲ್ಲಿ ಇರಿಸಿ, ಅದರ ಮೇಲೆ ಅವರಿಗೆ ಸಂಭಾವನೆಯನ್ನು ನೀಡಲಾಗುತ್ತಿತ್ತು. ಆದರೀಗ, ಅದನ್ನು ತೆಗೆದುಹಾಕಿರುವ ಬಿಸಿಸಿಐ, ಆ ಗ್ರೂಪ್ನಲ್ಲಿರುವ ಆಟಗಾರರನ್ನು ಅವರ ಲಭ್ಯತೆ ಮತ್ತು ಪ್ರದರ್ಶನದ ಆಧಾರದ ಮೇರೆಗೆ ಬಡ್ತಿ ಮತ್ತು ಹಿಂಬಡ್ತಿ ನೀಡಿದೆ. ಅದರಂತೆಯೇ, ಹೊಸ ಕೇಂದ್ರ ಒಪ್ಪಂದದಲ್ಲಿ, ವಿರಾಟ್ ಮತ್ತು ರೋಹಿತ್ರನ್ನು ಬಿ ಗ್ರೇಡ್ಗೆ ಇಳಿಸಲಾಗಿದೆ.