ಆರ್​ಸಿಬಿ ಸೇರ್ತಾರಾ ಹಿಟ್​ಮ್ಯಾನ್​? ಕೊನೆಗೂ ರೋಹಿತ್ ಶರ್ಮಾರ ರೆಡ್ ಜೆರ್ಸಿ ಗುಟ್ಟು ರಟ್ಟು..! Rohit Sharma

ಆರ್​ಸಿಬಿ ಸೇರ್ತಾರಾ ಹಿಟ್​ಮ್ಯಾನ್​? ಕೊನೆಗೂ ರೋಹಿತ್ ಶರ್ಮಾರ ರೆಡ್ ಜೆರ್ಸಿ ಗುಟ್ಟು ರಟ್ಟು..! Rohit Sharma
ಆರ್​ಸಿಬಿ ಸೇರ್ತಾರಾ ಹಿಟ್​ಮ್ಯಾನ್​? ಕೊನೆಗೂ ರೋಹಿತ್ ಶರ್ಮಾರ ರೆಡ್ ಜೆರ್ಸಿ ಗುಟ್ಟು ರಟ್ಟು..! Rohit Sharma
Published on

ಪ್ರಮುಖ ಮುಖ್ಯಾಂಶಗಳು

  • ರೋಹಿತ್ ಶರ್ಮಾ ಆರ್‌ಸಿಬಿ ಸೇರುವ ಗಾಸಿಪ್ ಸುಳ್ಳು
  • ಕೆಂಪು ಜರ್ಸಿ ಫೋಟೋದ ಅಸಲಿ ರಹಸ್ಯ ಗೇಮಿಂಗ್ ಪ್ರಚಾರ
  • ಲೈಟ್‌ಫುರಿ ಗೇಮ್ಸ್ ಜೊತೆ ರೋಹಿತ್ ಶರ್ಮಾ ಒಪ್ಪಂದ
  • ಇ-ಕ್ರಿಕೆಟ್ ಮೊಬೈಲ್ ಗೇಮ್‌ನಲ್ಲಿ 'ಹಿಟ್‌ಮ್ಯಾನ್' ಎಂಟ್ರಿ
ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ( Rohit Sharma ) ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಕೆಂಪು ಜರ್ಸಿಯ ಫೋಟೋವೊಂದು ಭಾರಿ ಸಂಚಲನ ಮೂಡಿಸಿತ್ತು. 'ಹಿಟ್‌ಮ್ಯಾನ್' ಮುಂದಿನ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸೇರಲಿದ್ದಾರೆ ಎಂಬ ಗಾಸಿಪ್‌ಗಳು ಹಬ್ಬಿ, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದವು. ಆದರೆ, ಈ ವೈರಲ್ ಫೋಟೋದ ಅಸಲಿ ಸತ್ಯವೇ ಬೇರೆಯಾಗಿದ್ದು, ಐಪಿಎಲ್ ತಂಡದ ಬದಲಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.
ಈ ವೈರಲ್ ಫೋಟೋದ ಅಸಲಿ ರಹಸ್ಯವಿರುವುದು ಕ್ರಿಕೆಟ್ ಜಗತ್ತಿನಿಂದ ಹೊರತಾದ ಮೊಬೈಲ್ ಗೇಮಿಂಗ್ ರಂಗದಲ್ಲಿ. ಹೌದು, ರೋಹಿತ್ ಶರ್ಮಾ ಅವರು ಬೆಂಗಳೂರು ಮೂಲದ ಗೇಮ್-ಟೆಕ್ ಸ್ಟುಡಿಯೊ 'ಲೈಟ್‌ಫುರಿ ಗೇಮ್ಸ್' ಜೊತೆ ಅಧಿಕೃತವಾಗಿ ಕೈಜೋಡಿಸಿದ್ದು, ಕಂಪನಿಯ ಪ್ರಮುಖ ಕಾರ್ಯತಂತ್ರದ ಹೂಡಿಕೆದಾರರಾಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಗೇಮಿಂಗ್ ಲೋಕದಲ್ಲೂ ತಮ್ಮ ಪ್ರಭಾವವನ್ನು ವಿಸ್ತರಿಸಲು ಅವರು ಮುಂದಾಗಿದ್ದಾರೆ.
ಕೇವಲ ಹೂಡಿಕೆದಾರರಾಗಿ ಮಾತ್ರವಲ್ಲದೆ, ಲೈಟ್‌ಫುರಿ ಗೇಮ್ಸ್ ಅಭಿವೃದ್ಧಿಪಡಿಸುತ್ತಿರುವ ಅತ್ಯಂತ ಮಹತ್ವಾಕಾಂಕ್ಷೆಯ AAA ಮೊಬೈಲ್ ಗೇಮ್ 'eCricket' ನಲ್ಲಿ ರೋಹಿತ್ ಶರ್ಮಾ ಅಧಿಕೃತ ಲೈಸೆನ್ಸ್ಡ್​ ಆಟಗಾರನಾಗಿ ನೇರವಾಗಿ ಕಾಣಿಸಿಕೊಳ್ಳಲಿದ್ದಾರೆ. ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ಆ ಕೆಂಪು ಜರ್ಸಿ ಲುಕ್ ವಾಸ್ತವವಾಗಿ ಈ ಗೇಮ್‌ನ 'ಅಲ್ಟಿಮೇಟ್ ಸ್ಕ್ವಾಡ್' ಮೋಡ್‌ನ ಸಿನಿಮ್ಯಾಟಿಕ್ ಟೀಸರ್‌ನದ್ದಾಗಿದೆ. ಈ ವಿಶೇಷ ಮೋಡ್‌ನಲ್ಲಿ ಗೇಮರ್‌ಗಳು 700ಕ್ಕೂ ಅಧಿಕ ಅಧಿಕೃತ ಕ್ರಿಕೆಟಿಗರ ಪೈಕಿ ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಲೈಟ್‌ಫುರಿ ಗೇಮ್ಸ್ ಸ್ಟುಡಿಯೊದ ಈ ಸಾಹಸಕ್ಕೆ ಬೆಂಬಲ ನೀಡುತ್ತಿರುವ ಏಕೈಕ ಆಟಗಾರ ರೋಹಿತ್ ಶರ್ಮಾ ಮಾತ್ರವಲ್ಲ. ಈಗಾಗಲೇ ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ಎಂ.ಎಸ್. ಧೋನಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ಗೇಮಿಂಗ್ ಸ್ಟುಡಿಯೊಗೆ ಸಾಥ್ ನೀಡಿದ್ದಾರೆ. ಈಗ ರೋಹಿತ್ ಶರ್ಮಾ ಕೂಡ ಈ ಸ್ಟಾರ್ ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ, ಮುಂಬರುವ ಈ ಗೇಮ್ ಬಗ್ಗೆ ಇರುವ ನಿರೀಕ್ಷೆಗಳು ಗಣನೀಯವಾಗಿ ದುಪ್ಪಟ್ಟಾಗಿವೆ.
ಅಪಾರ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಗೇಮ್‌ನ ಪ್ರಿ-ರಿಜಿಸ್ಟ್ರೇಷನ್ ಈಗಾಗಲೇ 3 ಲಕ್ಷಕ್ಕೂ ಅಧಿಕ ಗಡಿ ದಾಟಿರುವುದು ಇದರ ಮೇಲಿನ ಕ್ರೇಜ್ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ. ಲೈಟ್‌ಫುರಿ ಗೇಮ್ಸ್ ಸಂಸ್ಥೆಯು ಮುಂಬರುವ ಸೆಪ್ಟೆಂಬರ್ 2026ರಲ್ಲಿ ಆರಂಭಿಕ ಬಳಕೆದಾರರಿಗಾಗಿ ಇದರ ಕ್ಲೋಸ್ಡ್ ಬೀಟಾ ಟೆಸ್ಟಿಂಗ್ ಆರಂಭಿಸಲು ಸಜ್ಜಾಗಿದೆ. ಒಟ್ಟಿನಲ್ಲಿ ರೋಹಿತ್ ಶರ್ಮಾ ಆರ್‌ಸಿಬಿ ಸೇರುತ್ತಾರೆ ಎಂಬ ಸಾಮಾಜಿಕ ಜಾಲತಾಣದ ಊಹಾಪೋಹ ಕೇವಲ ಒಂದು ತಮಾಷೆಯ ಗೊಂದಲವಷ್ಟೇ ಎಂಬುದು ಈಗ ಸಾಬೀತಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net