ಮುಖೇಶ್ ಅಂಬಾನಿ ಕೊಟ್ಟ ತಿಂಡಿ ಬೇಡವೆಂದ ರೋಹಿತ್! 'ನೋ' ಎನ್ನಲು ಅದೇ ಕಾರಣ ಎಂದ ನೆಟ್ಟಿಗರು

ರೋಹಿತ್ ಶರ್ಮ
ರೋಹಿತ್ ಶರ್ಮ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ಯುಎಸ್​ಎ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು
  • ಉದ್ಘಾಟನಾ ಪಂದ್ಯಕ್ಕೆ ಆಗಮಿಸಿದ್ದ ರೋಹಿತ್ ಶರ್ಮ
  • ಮುಖೇಶ್ ಅಂಬಾನಿ ನೀಡಿದ ಸ್ನ್ಯಾಕ್ಸ್ ಬೇಡವೆಂಡ ರೋಹಿತ್​ ರಿಯಾಕ್ಷನ್ ವೈರಲ್
ನವದೆಹಲಿ: ನಿನ್ನೆ (ಫೆ.07) ನಡೆದ ಭಾರತ ಮತ್ತು ಯುಎಸ್​ಎ ನಡುವಿನ ಟಿ20 ವಿಶ್ವಕಪ್​ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ರೋಚಕ ಗೆಲುವನ್ನೇ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಮತ್ತೊಂದೆಡೆ, ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಸ್ಟೇಡಿಯಂಗೆ ಆಗಮಿಸಿದ್ದ ರೋಹಿತ್ ಶರ್ಮ, ರಿಲಯನ್ಸ್​ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಕೊಟ್ಟ ಟೀ ಮತ್ತು ತಿನಿಸನ್ನು ತಿರಸ್ಕರಿಸಿದ ದೃಶ್ಯ ಸದ್ಯ ಜಾಲತಾಣಗಳಲ್ಲಿ ನೆಟ್ಟಿಗರ ಮಿಶ್ರ ಅಭಿಪ್ರಾಯಗಳಿಗೆ ಕಾರಣವಾಗಿದೆ. 
ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಒಂದೆಡೆಯಾದರೆ, ​2026ರ ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಟೂರ್ನಮೆಂಟ್ ರಾಯಭಾರಿಯಾಗಿ ಕಾಣಿಸಿಕೊಂಡ ರೋಹಿತ್ ಶರ್ಮ, ಪ್ರತಿಷ್ಠಿತ ಐಸಿಸಿ ಟ್ರೋಫಿಯನ್ನು ಹೊತ್ತು, ಐತಿಹಾಸಿಕ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ನಡೆದುಕೊಂಡು ಹೋಗಿದ್ದು ಮತ್ತೊಂದೆಡೆ. ಈ ಮಧ್ಯೆ, ಮುಖೇಶ್​ ಅಂಬಾನಿ ಜತೆ ಸ್ಟ್ಯಾಂಡ್ಸ್​ನಲ್ಲಿ ಕುಳಿತಿದ್ದ ರೋಹಿತ್, ಅಂಬಾನಿ ಅವರು ನೀಡಿದ ಟೀ ಮತ್ತು ಬಿಸ್ಕತ್​ ಬೇಡೆವಂದ ರೀತಿ ನೋಡಿ, ಇದೇನು ಡಯೆಟ್​ ಮಹಿಮೆಯೇ? ಎಂದೆಲ್ಲ ನೆಟ್ಟಿಗರು ಲೇವಡಿ ಮಾಡಿದ್ದಾರೆ.
ತಮ್ಮ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಪತ್ನಿ ನೀತಾ ಅವರೊಂದಿಗೆ ವಿಐಪಿ ಬಾಕ್ಸ್​ನಲ್ಲಿದ್ದ ಮುಖೇಶ್ ಅಂಬಾನಿ, ರೋಹಿತ್​ರನ್ನು ಮಾತನಾಡಿಸಿ, ಟೀ ಮತ್ತು ಬಿಸ್ಕತ್​ ನೀಡಿದರು. ಇದನ್ನು ನೋಡ್ತಿದ್ದಂತೆ ಬೇಡ ಎಂದ ರೋಹಿತ್ ಶರ್ಮ ರಿಯಾಕ್ಷನ್ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೊಂದು ದೃಶ್ಯವನ್ನು ಮುಂದಿಟ್ಟು ಒಂದೊಂದು ರೀತಿಯಲ್ಲಿ ಲೇವಡಿ ಮಾಡಿರುವ ನೆಟ್ಟಿಗರು, 2027ರ ವಿಶ್ವಕಪ್​ ಆಡಬೇಕು ಎಂಬ ಛಲದಿಂದ, ಹೆಚ್ಚು ತಿನ್ನೋದು ಬೇಡ ಎಂದು ರೋಹಿತ್ ನಿರ್ಧರಿಸಿದ್ದಾರೆ ಎಂದಿದ್ದಾರೆ.

ಹೀಗಿದೆ ನೆಟ್ಟಿಗರ ರಿಯಾಕ್ಷನ್​ಗಳು

1. ರೋಹಿತ್ ಬಾಯ್​, ನಿಮ್ಮ ಡಯಟ್​ ಪ್ಲ್ಯಾನ್​ ತುಂಬ ಕಠಿಣವಾಗಿದೆ ಅನಿಸುತ್ತೆ? 2027 ವರ್ಲ್ಡ್​ಕಪ್​ ಮುಗಿಯುವವರೆಗೂ ಕುರುಕಲು ತಿಂಡಿಗಳು ಬೇಡ, ಕೇವಲ ಬೌಂಡರಿ ಮಾತ್ರ ಇರಲಿ ಎಂದು ನಿರ್ಧರಿಸಬೇಕು? ಎಂದಿದ್ದಾರೆ.
2. ಅದು ಟೀ ಅಲ್ಲ ಅನಿಸುತ್ತೆ, ಯಾವುದೋ ತಿನಿಸು ಮತ್ತು ಚಟ್ನಿ ಅಂತೆ ಕಾಣುತ್ತೆ ಎಂದು ಕಮೆಂಟ್​ ಹಾಕಿದ್ದಾರೆ. 
3. ಮತ್ತೊಬ್ಬರು, ಇದು ಶಿಸ್ತು ಎಂದರೆ. ವಿಶ್ವಕಪ್​ ಗೆಲ್ಲುವುದೇ ದೊಡ್ಡ ಗುರಿ ಆಗಿರುವಾಗ, ಅಂಬಾನಿ ಅವರ ಸ್ನಾಕ್ಸ್​ಗೆ ಜಾಗವಿಲ್ಲ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net