ಪಾಕ್​ ತಂಡದ ಕ್ಯಾಪ್ಟನ್​ ರೋಹಿತ್​ ಶರ್ಮ? ಗಿಲ್​, ಅಕ್ಷರ್​, ತಿಲಕ್​ ವರ್ಮಾ ಹೆಸರು ಪಟ್ಟಿಯಲ್ಲಿ! ಇದೆಂಥಾ ಎಡವಟ್ಟು

ರೋಹಿತ್ ಶರ್ಮ ಹೆಸರು ಪಾಕ್​ ತಂಡದಲ್ಲಿ
ರೋಹಿತ್ ಶರ್ಮ ಹೆಸರು ಪಾಕ್​ ತಂಡದಲ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೇಳೆ ಬಿಗ್ ಮಿಸ್ಟೇಕ್​
  • ಸ್ಕೋರ್​ ಬೋರ್ಡ್​ನಲ್ಲಿ ಪಾಕ್​ ತಂಡದಲ್ಲಿ ಭಾರತೀಯ ಆಟಗಾರರ ಪಟ್ಟಿ
  • ರೋಹಿತ್ ಶರ್ಮಾ ನಾಯಕ ಎಂದು ತೋರಿಸಿದ ಪಟ್ಟಿಗೆ ನೆಟ್ಟಿಗರು ಆಕ್ರೋಶ
PAK vs BAN: ಇಲ್ಲಿ ನೋಡಿದರೆ ಐಪಿಎಲ್​ 19ನೇ ಆವೃತ್ತಿಯು ಯಶಸ್ವಿಯಾಗಿ ನಡೆಯುತ್ತಿದ್ದು, ರೋಹಿತ್ ಶರ್ಮ ಸೇರಿದಂತೆ ಟೀಮ್ ಇಂಡಿಯಾದ ಸ್ಟಾರ್​ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳ ಪರ ಆಡುತ್ತಿದ್ದಾರೆ. ಹೀಗಿರುವಾಗ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೇಳೆ ನಡೆದ ಬಿಗ್ ಮಿಸ್ಟೇಕ್​ ಸದ್ಯ ಭಾರತೀಯ ಕ್ರಿಕೆಟ್​ ಪ್ರಿಯರ ಪಿತ್ತವನ್ನು ನೆತ್ತಿಗೇರಿಸಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ (ಬಾಂಗ್ಲಾದೇಶ vs ಪಾಕಿಸ್ತಾನ, 1 ನೇ ಟೆಸ್ಟ್,) ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 413 ರನ್‌ಗೆ ಆಲೌಟ್ ಆಯಿತು. ಈ ಸಂದರ್ಭದಲ್ಲಿ, ಒಂದು ಶಾಕಿಂಗ್​ ಘಟನೆ ನಡೆದಿದ್ದು, ರೋಹಿತ್ ಶರ್ಮಾ ಮತ್ತು ಇತರ ಭಾರತೀಯ ಕ್ರಿಕೆಟಿಗರನ್ನು ಪಾಕಿಸ್ತಾನ ತಂಡದಲ್ಲಿರುವಂತೆ ಸ್ಕೋರ್‌ಬೋರ್ಡ್‌ನಲ್ಲಿ ತೋರಿಸಲಾಗಿದೆ.
ಇಲ್ಲಿ ಪಾಕ್​ ತಂಡದ ನಾಯಕನಾಗಿ ರೋಹಿತ್ ಶರ್ಮಾ ಇದ್ದರೆ, ಅವರ ನಂತರದಲ್ಲಿ ಶುಭಮನ್​ ಗಿಲ್​, ಅಕ್ಷರ್ ಪಟೇಲ್​, ತಿಲಕ್​ ವರ್ಮಾ ಸೇರಿ ಸ್ಟಾರ್ ಆಟಗಾರರ ಹೆಸರಿದೆ. ಅಸಲಿಗೆ, ಈ ಪಾಕಿಸ್ತಾನ ತಂಡದಲ್ಲಿ ಭಾರತೀಯ ಆಟಗಾರರ ಪ್ಲೇಯಿಂಗ್​ ಎಲೆವನ್​ ಇದೆ. ಬ್ರಾಡ್​ಕಾಸ್ಟರ್​ ಮಾಡಿದ ದೊಡ್ಡ ಎಡವಟ್ಟು ಸೋಷಿಯಲ್ ಮೀಡಿಯಾದಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್​ ಪ್ರೇಮಿಗಳ ಛೀಮಾರಿಗೆ ಕಾರಣವಾಗಿದೆ.
ಢಾಕಾ ಕ್ರಿಕೆಟ್ ಕ್ರೀಡಾಂಗಣದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ, ಪಾಕಿಸ್ತಾನ ಸ್ಕೋರ್‌ಬೋರ್ಡ್‌ನಲ್ಲಿ ಭಾರತೀಯ ಆಟಗಾರರ ಹೆಸರುಗಳನ್ನು ಪ್ರದರ್ಶಿಸಲಾಗಿದೆ. ಬ್ರಾಡ್​ಕಾಸ್ಟರ್​ ತಲೆಯಲ್ಲಿ ಆನೆ ಲದ್ದಿ ತುಂಬಿತ್ತೆ ಎಂದು ಅನೇಕರು ಕಿಡಿಕಾರುತ್ತಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಬಿಗ್ ಮಿಸ್ಟೇಕ್​ ಹಿಂದೆಂದೂ ಸಂಭವಿಸಿಲ್ಲ. ಪಾಕ್​ ಆಟಗಾರರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರನ್ನು ಹಾಕಿರುವುದು ದೊಡ್ಡ ತಪ್ಪು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net