ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದ ಕೊಹ್ಲಿ, ಮೂರನೇ ಮ್ಯಾಚ್ನಲ್ಲಿ ಅರ್ಧಶತಕ ಸಿಡಿಸಿದರು. ಇನ್ನು ರೋಹಿತ್ ಶರ್ಮ ಕೂಡ ಅರ್ಧಶತಕಗಳ ಮೂಲಕ ಸ್ಪೋಟಕ ಇನ್ನಿಂಗ್ಸ್ ನೀಡಿದರು. 'ರೋಕೊ' ಜೋಡಿಯ ಆಟಕ್ಕೆ ಫಿದಾ ಆದ ಮಾಜಿ ಹಿರಿಯ ಕ್ರಿಕೆಟಿಗರು ಮತ್ತು ಅಭಿಮಾನಿ ಬಳಗ, ದಿಗ್ಗಜ ಬ್ಯಾಟರ್ಗಳ ಬೆನ್ನುತಟ್ಟಿದರು. ಆದರೆ, ತಂಡದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಮಾತ್ರ ಇವರಿಬ್ಬರಿಗೂ ಪ್ರೋತ್ಸಾಹ ಅಥವಾ ಪ್ರಶಂಸೆ ವ್ಯಕ್ತಪಡಿಸುವ ಪ್ರಯತ್ನ ಮಾಡದಿರುವುದು ಆಂತರಿಕ ಸಮಸ್ಯೆ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ಒತ್ತಿ ಹೇಳಿದೆ.