96 ರನ್ ಸಿಡಿಸಿದ್ರೂ ಸಿಗಲಿಲ್ವಾ ನಾಯಕನ ಮೆಚ್ಚುಗೆ!..; ಸೂರ್ಯವಂಶಿ ವಿರುದ್ಧ ಪರಾಗ್ ಸಿಟ್ಟಾಗಿದ್ದಕ್ಕೆ ಅಸಲಿ ಕಾರಣವೇನು ಗೊತ್ತಾ...? Vaibhav Suryavanshi

Vaibhav Suryavanshi (ಚಿತ್ರ X)
Vaibhav Suryavanshi (ಚಿತ್ರ X)
Published on
ಮುಲ್ಲನ್‌ಪುರ: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುವ ಕ್ವಾಲಿಫೈಯರ್ ಪಂದ್ಯಗಳು ಕೇವಲ ರನ್ ಮಳೆಗಷ್ಟೇ ಅಲ್ಲದೆ, ಮೈದಾನದ ಒಳಗಿನ ಹೈ-ಡ್ರಾಮಾಗಳಿಗೂ ಹೆಸರುವಾಸಿ. ಇತ್ತೀಚೆಗೆ ಮುಲ್ಲನ್‌ಪುರದಲ್ಲಿ ಗುಜರಾತ್ ಟೈಟನ್ಸ್ (GT) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳ ನಡುವೆ ನಡೆದ ಕ್ವಾಲಿಫೈಯರ್ 2 ಪಂದ್ಯ (Vaibhav Suryavanshi) ಇಂತಹದ್ದೇ ಒಂದು ವಿವಾದಾತ್ಮಕ ಘಟನೆಗೆ ಸಾಕ್ಷಿಯಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಡಗೌಟ್‌ನಲ್ಲಿ ತನ್ನದೇ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕ್ರಿಕೆಟ್​ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಘಟನೆ ಏನು?

ಪಂದ್ಯ ನಡೆಯುವ ವೇಳೆ ಯುವ ಆರಂಭಿಕ ಆಟಗಾರ ಅದ್ಭುತ ಆರಂಭ ನೀಡಿದರು. ಕೇವಲ 47 ಎಸೆತಗಳಲ್ಲಿ 96 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅವರು, ಕೇವಲ ನಾಲ್ಕು ರನ್​ಗಳಿಂದ ತಮ್ಮ ಅರ್ಹ ಶತಕವನ್ನು ಮಿಸ್​ ಮಾಡಿಕೊಂಡು ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು. 

ಡಗೌಟ್‌ನಲ್ಲಿ ನಡೆದಿದ್ದೇನು?

ವೈಭವ್ ಸೂರ್ಯವಂಶಿ ಔಟಾಗಿ ಡಗೌಟ್‌ಗೆ ಮರಳುತ್ತಿದ್ದಂತೆ, ಅಲ್ಲಿ ಕುಳಿತಿದ್ದ ನಾಯಕ ರಿಯಾನ್ ಪರಾಗ್ ಯುವ ಆಟಗಾರನ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿರುವಂತೆ ಅಲ್ಲಿನ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಆದಾಗ್ಯೂ, ನಾಯಕ ತನ್ನ ಕೈ ಸನ್ನೆಗಳ ಮೂಲಕ ಆಕ್ರೋಶವನ್ನು ಹೊರಹಾಕುತ್ತಿದ್ದು, ಇದನ್ನು ವೈಭವ್ ಆಲಿಸುತ್ತಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣಿಸಿದೆ. 
ಆದಾಗ್ಯೂ, ಸಂಭಾಷಣೆಯ ನಿಖರವಾದ ಸಂದರ್ಭ ಸ್ಪಷ್ಟವಾಗಿಲ್ಲ. ಆದರೆ, ಈ ಕ್ಲಿಪ್​ ಆನ್​ಲೈನ್​ನಲ್ಲಿ ಬೇಗನೆ ವೈರಲ್​ ಆಗಿದ್ದು, ಕೆಲವು ಅಭಿಮಾನಿಗಳು ವೈಭವ್​ ಪಂದ್ಯಕ್ಕೆ ಚೆನ್ನಾಗಿ ಸೆಟ್ ಆದ ನಂತರ, ಶತಕದ ಸನಿಹ ಬಂದು ವಿಕೆಟ್  ಕಳೆದುಕೊಂಡಿರುವುದು ನಾಯಕನಾಗಿ ಪರಾಗ್ ಅವರಿಗೆ ತೀವ್ರ ನಿರಾಶೆ ಮೂಡಿಸಿರಬಹುದು. ತಂಡವನ್ನು ಮತ್ತಷ್ಟು ಬಲಿಷ್ಠ ಸ್ಥಿತಿಗೆ ಕೊಂಡೊಯ್ಯುವ ಅವಕಾಶವನ್ನು ಯುವ ಆಟಗಾರ ಕೈಚೆಲ್ಲಿದ್ದಕ್ಕೆ ಅವರು ತಮ್ಮ ಅಸಮಾಧಾನವನ್ನು ಆ ರೀತಿ ಹೊರಹಾಕಿದ್ದಾರೆ ಎಂದು ಬಳಕೆದಾರರು ತಿಳಿಸಿದ್ದಾರೆ.
ಇನ್ನೂ ಕೆಲವರು ಪರಾಗ್​ ಸೂರ್ಯವಂಶಿಯವರನ್ನು ನಿಂದಿಸುತ್ತಿರಲಿಲ್ಲ. ಬದಲಿಗೆ "ಆಟದ ಅರಿವು" ಮತ್ತು ಇನಿಂಗ್ಸ್ ಅನ್ನು ಹೇಗೆ ಮುಕ್ತಾಯಗೊಳಿಸಬೇಕು ಎಂಬುದರ ಬಗ್ಗೆ ಕಠಿಣವಾಗಿ ಪಾಠ ಕಲಿಸುತ್ತಿದ್ದರು ಎಂದು ಕಾಮೆಂಟ್​ ಮಾಡಿದ್ದಾರೆ. 
ಕ್ವಾಲಿಫೈಯರ್ 2 ರಲ್ಲಿ ತಮ್ಮ ತಂಡವು ಹೋರಾಡುತ್ತಿದ್ದಾಗ, ಸೂರ್ಯವಂಶಿ ಕೇವಲ 47 ಎಸೆತಗಳಲ್ಲಿ 96 ರನ್ ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. 4 ಪಂದ್ಯಗಳಲ್ಲಿ ವೈಭವ್ ಶತಕ ವಂಚಿತರಾಗಿರುವುದು ಇದು ಮೂರನೇ ಬಾರಿಯಾದ್ದರಿಂದ ನಿರಾಶೆಯಿಂದ ತಮ್ಮ ಹೆಲ್ಮೆಟ್​ನ್ನು ಡಗೌಟ್​ಗೆ ಎಸೆದರು (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net