ದೋಹಾ: ಐಪಿಎಲ್ ತಾರೆ ವೈಭವ್ ಸೂರ್ಯವಂಶಿ (144 ರನ್, 42 ಎಸೆತ, 11 ಬೌಂಡರಿ, 15 ಸಿಕ್ಸರ್) ಸ್ಫೋಟಕ ಆಟ ಹಾಗೂ ನಾಯಕ ಜಿತೇಶ್ ಶರ್ಮ (83* ರನ್, 32 ಎಸೆತ, 8 ಬೌಂಡರಿ, 6 ಸಿಕ್ಸರ್) ಬಿರುಸಿನಾಟದ ಬಲದಿಂದ ಯುಎಇ ಎದುರು ರನ್ ಮಳೆ ಹರಿಸಿದ ಭಾರತ ಎ ತಂಡ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟ20 ಟೂರ್ನಿಯಲ್ಲಿ 148 ರನ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ.