ಮೈದಾನದಲ್ಲೇ ರೊಚ್ಚಿಗೆದ್ದ ರಿಷಭ್ ಪಂತ್! ಎದುರಾಳಿ​ ಮೇಲಿನ ಕೋಪಕ್ಕೆ ಕಾಲಿನಿಂದಲೇ ಬಾಲ್​ ಒದ್ದ ವಿಡಿಯೋ ವೈರಲ್​

 ಎದುರಾಳಿ​ ಮೇಲಿನ ಕೋಪಕ್ಕೆ ಕಾಲಿನಿಂದಲೇ ಬಾಲ್​ ಒದ್ದ ದೃಶ್ಯ
ಎದುರಾಳಿ​ ಮೇಲಿನ ಕೋಪಕ್ಕೆ ಕಾಲಿನಿಂದಲೇ ಬಾಲ್​ ಒದ್ದ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ಕ್ರಿಕೆಟ್ ವಿರುದ್ಧದ ಸರಣಿಗೂ ಮುನ್ನ ಅಭ್ಯಾಸ ಪಂದ್ಯ
  • ಪದೇ ಪದೇ ವೈಡ್​ನತ್ತ ಬಾಲ್​ ಎಸೆಯುತ್ತಿದ್ದ ಬೌಲರ್​ ವಿರುದ್ಧ ಪಂತ್​ ಸಿಟ್ಟು
  • ಬ್ಯಾಟ್​ ಬದಲಿಗೆ ಕಾಲಿನಿಂದಲೇ ಬಾಲ್​ ಕಿಕ್​ ಮಾಡಿದ ಟೀಮ್ ಇಂಡಿಯಾ ಬ್ಯಾಟರ್
Rishabh Pant: ತಮ್ಮ ವಿಭಿನ್ನ ಬ್ಯಾಟಿಂಗ್​ ಶೈಲಿ ಹಾಗೂ ಮೈದಾನದಲ್ಲಿ​ ಆಗಾಗ್ಗೆ ಮಾಡುವ ತಮಾಷೆಗಳಿಂದಲೇ ಕ್ರಿಕೆಟ್​ ಪ್ರೇಮಿಗಳನ್ನು ರಂಜಿಸುವ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್​ ರಿಷಭ್ ಪಂತ್, ಈ ಬಾರಿ ಬೇರೆ ರೀತಿಯಲ್ಲೇ ನೋಡುಗರ ಗಮನ ಸೆಳೆದಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ವಿರುದ್ಧದ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದ 3ನೇ ದಿನದಾಟದಲ್ಲಿ, ಪಂತ್ ತಮ್ಮ ಬ್ಯಾಟಿಂಗ್ ಜತೆಗೆ ಫುಟ್‌ಬಾಲ್ ಸ್ಕಿಲ್​ ತೋರಿಸಿರುವುದು ಸದ್ಯ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತು. ಬೌಲರ್ ​ಪದೇ ಪದೇ ವೈಡ್​ ಎಸೆಯುತ್ತಿದ್ದಕ್ಕೆ ಸಿಟ್ಟಿಗೆದ್ದ ಪಂತ್​, ಮತ್ತದೇ ವೈಡ್​ ಬಂದ ಬಾಲ್​ ಅನ್ನು ಕಾಲಿನಿಂದ ಕಿಕ್​ ಹೊಡೆದಿದ್ದಾರೆ. ಇದು ಕೆಲವರಿಗೆ ಹಾಸ್ಯಸ್ಪದ ಎನಿಸಿದರೆ, ಇನ್ನೂ ಕೆಲವರಿಗೆ ಏಕಿಷ್ಟು ಸಿಟ್ಟು ಎಂದು ಪ್ರಶ್ನಿಸುವಂತೆ ಮಾಡಿದೆ.
ಶ್ರೀಲಂಕಾ ಬೌಲರ್​ ಕೇಶರ ನುವಾಂತ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ಅವರು, ಆ ಬಳಿಕ ಸ್ಪಿನ್ನರ್ ದಿಲುಮ್ ಸುದೀರ ಅವರ ಎರಡನೇ ಎಸೆತವನ್ನೂ ಗ್ಯಾಲರಿಯತ್ತ ಬಾರಿಸಿದರು. ಆದ್ರೆ, ಅದೇ ಸುದೀರ, ಪಂತ್ ರನ್‌ ಗಳಿಸದಂತೆ ತಡೆಯಲು ಪದೇ ಪದೇ ಲೆಗ್‌ ಸ್ಟಂಪ್‌ನಿಂದ ಆಚೆಗೆ ಬಾಲ್​ ಹಾಕಿದ್ದಕ್ಕೆ ಕೋಪಗೊಂಡು, ಬ್ಯಾಟ್​ ಬದಲಿಗೆ ಕಾಲಿನಿಂದಲೇ ಒದ್ದು ಹೊರಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net