ಈ ಒಪ್ಪಂದದ ಅಡಿಯಲ್ಲಿ ಕಮಲಿನಿ ಅವರ ವಿಶೇಷ ವಾಣಿಜ್ಯ ಮತ್ತು ಪ್ರತಿಭಾ ನಿರ್ವಹಣಾ ಪಾಲುದಾರ ಆಗಿರುವ 'ರೈಸ್ ವರ್ಲ್ಡ್‌ವೈಡ್', ಅವರ ಬ್ರ್ಯಾಂಡ್ ಪ್ರಚಾರಗಳು, ಕಾರ್ಯತಂತ್ರದ ಪಾಲುದಾರಿಕೆಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿನ ಭಾಗವಹಿಸುವಿಕೆ, ಪರವಾನಗಿ, ಡಿಜಿಟಲ್ ಕಂಟೆಂಟ್ ಮತ್ತು ದೀರ್ಘಕಾಲೀನ ಬ್ರ್ಯಾಂಡ್ ಅಭಿವೃದ್ಧಿಯಂಥ ವಿಷಯಗಳನ್ನು ನಿರ್ವಹಿಸಲಿದೆ. ಇದರಿಂದಾಗಿ ಈ ಯುವ ಕ್ರಿಕೆಟರ್ ತಮ್ಮ ಕ್ರಿಕೆಟ್ ವೃತ್ತಿಜೀವನದತ್ತ ಸಂಪೂರ್ಣ ಗಮನಹರಿಸಲು ಸಾಧ್ಯವಾಗುತ್ತದೆ.