ವೆಂಟಿಲೇಟರ್​ನಲ್ಲಿ ತಂದೆ... ಟೀಮ್​ ಇಂಡಿಯಾದಿಂದ ರಿಂಕು ದಿಢೀರ್ ಎಕ್ಸಿಟ್​! ​​ಜಿಂಬಾಬ್ವೆ ವಿರುದ್ಧದ ಸೂಪರ್​-8 ಪಂದ್ಯಕ್ಕೆ ಅಲಭ್ಯ | Rinku Singh

ರಿಂಕು ಸಿಂಗ್ ತಮ್ಮ ಪೋಷಕರ ಜೊತೆ
ರಿಂಕು ಸಿಂಗ್ ತಮ್ಮ ಪೋಷಕರ ಜೊತೆ
Published on
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​-8 ಹಂತದ ಪಂದ್ಯಗಳು ರೋಚಕವಾಗಿ ಸಾಗುತ್ತಿದ್ದು, ತನ್ನ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸಲು ವಿಫಲವಾಯಿತು. ಈ ಪಂದ್ಯದಲ್ಲಿ ಬ್ಯಾಟರ್​ಗಳ ವಿಫಲದಿಂದ ಹೀನಾಯ ಸೋಲು ಅನುಭವಿಸಿದ ಟೀಮ್ ಇಂಡಿಯಾಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ತಂಡದಿಂದ ರಿಂಕು ಸಿಂಗ್ ದಿಢೀರ್​ ಹೊರನಡೆದಿದ್ದಾರೆ.
ಜಿಂಬಾಬ್ವೆ ವಿರುದ್ಧದ ತನ್ನ ಎರಡನೇ ಸೂಪರ್-8 ಪಂದ್ಯವನ್ನು ಆಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಟೀಮ್ ಇಂಡಿಯಾಗೆ ರಿಂಕು ಸಿಂಗ್ ಅವರ ಅಲಭ್ಯತೆ ಕಾಡಲಾರಂಭಿಸಿದೆ. ಮುಂಬರುವ ಪ್ರತಿ ಪಂದ್ಯವನ್ನು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ, ರಿಂಕು ಸಿಂಗ್ ತಮ್ಮ ತಂದೆಗೆ ವಿಪರೀತ ಅನಾರೋಗ್ಯ ಸಮಸ್ಯೆ ಹಿನ್ನೆಲೆ ತಂಡದಿಂದ ದಿಢೀರ್ ಎಕ್ಸಿಟ್​ ಆಗಿದ್ದಾರೆ.
ಲಿವರ್ ಕ್ಯಾನ್ಸರ್​ನಿಂದ ಬಳಲುತ್ತಿರುವ ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ರ ಸಿಂಗ್, ನೋಯ್ಡಾದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ತಂದೆಯ ಆರೋಗ್ಯ ತೀರ ಹದಗೆಟ್ಟಿದ್ದರಿಂದ ಬೇರೆ ದಾರಿಯಿಲ್ಲದೆ ರಿಂಕು ತಂಡವನ್ನು ತೊರೆದಿದ್ದಾರೆ. ಈ ಬಗ್ಗೆ ಬಿಸಿಸಿಐ ಕೂಡ ಮಾಹಿತಿ ಹಂಚಿಕೊಂಡಿದ್ದು, ಮುಂದಿನ ಪಂದ್ಯಕ್ಕೆ ಅವರ ಲಭ್ಯತೆ ಬಹುತೇಕ ಡೌಟ್​ ಎನ್ನುವಂತಾಗಿದೆ. ಅಂತಿಮ ತಂಡದಲ್ಲಿ ರಿಂಕು ಸಿಂಗ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಆಡಿಸುವ ಸಾಧ್ಯತೆಗಳು ಹೆಚ್ಚಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net