ವರುಣ್ ಚಕ್ರವರ್ತಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಕಾರ್ತಿಕ್ ತ್ಯಾಗಿ 22 ಕ್ಕೆ 3, ನರೈನ್ 26 ರನ್ ನೀಡಿ 2 ವಿಕೆಟ್ ಕಿತ್ತರು. ತ್ರಿವಳಿ ದಾಳಿಗೆ ನಲುಗಿದ ರಾಯಲ್ಸ್, 16 ಓವರ್‌ಗಳಲ್ಲಿ 124 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಶಿಮ್ರಾನ್ ಹೆಟ್ಮೆಯರ್ (15) ಮತ್ತು ರಿಯಾನ್ ಪರಾಗ್ (12) ಅಲ್ಪ ಕಾಣಿಕೆ ನೀಡಿದರೂ, ಕೆಕೆಆರ್ ಬೌಲಿಂಗ್ ಮುಂದೆ ರಾಜಸ್ಥಾನ್ ಮಣಿಯಿತು. ಅಂತಿಮವಾಗಿ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.