ಬಿಸಿಸಿಐ ಮತ್ತು ಐಸಿಸಿ ವಿರುದ್ಧ ಕಿಡಿಕಾರಿದ್ದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ನಾವು ಬಾಂಗ್ಲಾದೇಶಕ್ಕೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿದ್ದು, ಅವರಿಗಾಗಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿದ್ದು ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು. ಬಿಸಿಬಿ ಮತ್ತು ಬಿಸಿಬಿ ಜಂಟಿಯಾಗಿ ಸಲ್ಲಿಸಿದ್ದ ಷರತ್ತುಗಳನ್ನು ಯಾವಾಗ ಐಸಿಸಿ ಮುಲಾಜಿಲ್ಲದೇ ತಿರಸ್ಕರಿಸಿತೋ, ಆಗಲೇ ಬಾಂಗ್ಲಾ ಮತ್ತು ಪಾಕ್, ಇನ್ನೂ ನಮ್ಮ ಆಟ ನಡೆಯುವುದಿಲ್ಲ ಎಂದು ತಮ್ಮ ನಿರ್ಧಾರಗಳಲ್ಲಿ ಉಲ್ಟಾ ಹೊಡೆಯಿತು.