2000ದಲ್ಲಿ, ಹ್ಯಾನ್ಸಿ ಕ್ರಾಹ್ನ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಕಳೆದ ವರ್ಷ, ಟಾಪ್ ಲ್ಯಾಥಮ್ ಕ್ಯಾಪ್ಟನ್ಸಿಯ ನ್ಯೂಜಿಲೆಂಡ್ ತಂಡ ಭಾರತವನ್ನು 3-0 ಅಂತರದಿಂದ ಮಣಿಸಿತು. 1980ರಲ್ಲಿ, ಬಿಸಿಸಿಐ 50 ವರ್ಷಗಳನ್ನು ಪೂರೈಸಿದಾಗ, ಮುಂಬೈ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಕೇವಲ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿತು. ಆ ಪಂದ್ಯವನ್ನು ಭಾರತ 10 ವಿಕೆಟ್‌ಗಳಿಂದ ಸೋತಿತು. ಆದರೆ, ಒಂದೇ ಪಂದ್ಯ ಆಡುವುದನ್ನು ಸರಣಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದು ಪರಿಗಣನೆಗೆ ಬರಲಿಲ್ಲ.