ಹಿಸ್ಟರಿ ರಿಪೀಟ್​! ಡೆಲ್ಲಿ​ ವಿರುದ್ಧ ರೋಚಕ ಗೆಲುವು; 2ನೇ ಬಾರಿ WPL ಕಿರೀಟಕ್ಕೆ ಮುತ್ತಿಟ್ಟ ಆರ್​ಸಿಬಿ ವನಿತೆಯರು | WPL Final 2026

2026 ಡಬ್ಲ್ಯೂಪಿಎಲ್​ ಟ್ರೋಫಿ ಗೆದ್ದ ಆರ್​ಸಿಬಿ ವನಿತೆಯರು
2026 ಡಬ್ಲ್ಯೂಪಿಎಲ್​ ಟ್ರೋಫಿ ಗೆದ್ದ ಆರ್​ಸಿಬಿ ವನಿತೆಯರು
Published on

ಪ್ರಮುಖ ಮುಖ್ಯಾಂಶಗಳು

  • ಎರಡನೇ ಬಾರಿಗೆ ಡಬ್ಲ್ಯೂಪಿಎಲ್​ ಕಪ್​ ಗೆದ್ದ ಆರ್​ಸಿಬಿ
  • ಹಿಸ್ಟರಿ ರಿಪೀಟ್​ ಎನ್ನುವಂತೆ ಎರಡನೇ ಬಾರಿ ಡೆಲ್ಲಿ ತಂಡವನ್ನೇ ಮಣಿಸಿ ಟ್ರೋಫಿಗೆ ಮುತ್ತಿಟ್ಟ ಆರ್​ಸಿಬಿ ವನಿತೆಯರು
  • ತಂಡದ ಪರ ಸ್ಫೋಟಕ ಇನ್ನಿಂಗ್ಸ್​ ನೀಡಿದ ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜೀಯಾ ವೊಲ್​
WPL Final 2026: ಇಂದು (ಜ.05) ವಡೋದರಾದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಸ್ಮೃತಿ ಮಂಧಾನ ಪಡೆ, ಹಿಸ್ಟರಿ ರಿಪೀಟ್​ ಎನ್ನುವಂತೆ ಎರಡನೇ ಬಾರಿಗೆ ಡಿಸಿ ತಂಡವನ್ನು ಮಣಿಸಿ, ಡಬ್ಲ್ಯೂಪಿಎಲ್​ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಪಂದ್ಯದ ವಿವರ

ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್‌ಸಿಬಿ, ಜೆಮಿಮಾ ರೊಡ್ರಿಗಸ್​ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​, 20 ಓವರ್​ ಅಂತ್ಯಕ್ಕೆ 4 ವಿಕೆಟ್​ಗಳನ್ನು ಕಳೆದುಕೊಂಡು 203 ರನ್​ ಕಲೆಹಾಕಿತು. ಈ ಬೃಹತ್ ರನ್​ಗಳ ಗುರಿಯನ್ನು ಬೆನ್ನತ್ತಿದ ಆರ್​ಸಿಬಿಗೆ ಆರಂಭಿಕರಾದ ಸ್ಮೃತಿ ಮಂಧಾನ (87 ರನ್​) ಮತ್ತು ಜಾರ್ಜಿಯಾ (79 ರನ್​) ಅವರ ಸ್ಫೋಟಕ ಇನ್ನಿಂಗ್ಸ್ ಗೆಲುವಿಗೆ ಪ್ರಮುಖ ಕಾರಣವಾಯಿತು.

ಡೆಲ್ಲಿ ಪರ ನಾಯಕಿ ಮಿಂಚಿನ ಆಟ

ಬ್ಯಾಟಿಂಗ್‌ನಲ್ಲಿ ತಂಡದ ಪರ ನಾಯಕಿ ಜೆಮಿಮಾ ರೊಡ್ರಿಗಸ್ ಅದ್ಭುತ ಇನ್ನಿಂಗ್ಸ್ ಆಡಿದರು. 37 ಎಸೆತಗಳಲ್ಲಿ 57 ರನ್ ಗಳಿಸಿದ ಅವರು, ತಂಡದ ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿದರು. ಜೆಮಿಮಾಗೆ ಸಾಥ್​ ನೀಡಿದ ಟಾಕ್ ಲಾರಾ ವೋಲ್ವಾರ್ಡ್ 25 ಎಸೆತಗಳಲ್ಲಿ 44 ರನ್ ಮತ್ತು ಲಿಜೆಲ್ಲೆ ಲೀ 30 ಎಸೆತಗಳಲ್ಲಿ 37 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಬೌಲಿಂಗ್​ನಲ್ಲಿ ಆರ್​ಸಿಬಿ ಪರ ನಾಡಿನ್ ಡಿ ಕ್ಲರ್ಕ್, ಸಯಾಲಿ ಸತ್‌ಘರೆ ಮತ್ತು ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರೆ, ಉಳಿದ ಬೌಲರ್‌ಗಳು ಡೆಲ್ಲಿ ಬ್ಯಾಟ್ಸ್‌ವುಮನ್​ಗಳನ್ನು ಕಂಟ್ರೋಲ್​ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಬೌಲರ್​ಗಳ ಪೈಕಿ ಲಾರೆನ್ ಬೆಲ್ ಎಲ್ಲರ ಗಮನ ಸೆಳೆದಿದ್ದು, ಮಾಡಿದ 4 ಓವರ್‌ಗಳಲ್ಲಿ ಕೇವಲ 19 ರನ್‌ ಕೊಡುವ ಮೂಲಕ ಆರ್​ಸಿಬಿ ಪಡೆಯನ್ನು ಒಂದು ಹಂತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net