ಏ.15, 2024... ಮೊದಲ ಪಂದ್ಯದಲ್ಲೇ ಆರ್​ಸಿಬಿ ಎದುರು ತನ್ನ ಹಳೆಯ ದಾಖಲೆ ಮುರಿಯಲು ಎಸ್​ಆರ್​ಎಚ್​ ಪಟ್ಟು | RCB vs SRH

RCB vs SRH
RCB vs SRH
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಐಪಿಎಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ
  • ಮೊದಲ ಪಂದ್ಯದಲ್ಲೇ ಹಳೆಯ ದಾಖಲೆ ಉಡೀಸ್​ಗೆ ಕಿಶನ್​ ಪಡೆ ಸಜ್ಜು
  • ಆರ್​ಸಿಬಿ ವಿರುದ್ಧವೇ ಹೊಸ ದಾಖಲೆ ಬರೆಯಲು ಸನ್​ರೈಸರ್ಸ್​ ತವಕ
ಬೆಂಗಳೂರು: ಇಷ್ಟು ದಿನಗಳ ಕಾಯುವಿಕೆಗೆ ಕಡೆಗೂ ತೆರೆ ಬಿದ್ದಿದ್ದು, ಇಂದಿನಿಂದ ಕ್ರಿಕೆಟ್​ ಪ್ರೇಮಿಗಳ ಚುಟುಕು ಕ್ರಿಕೆಟ್​ ಲೀಗ್​ ಐಪಿಎಲ್​ 19ನೇ ಆವೃತ್ತಿ ಶುರುವಾಗಲಿದೆ. ಎಂದಿನಂತೆ ಈ ಬಾರಿಯೂ 2026ರ ಕಿಕ್​ಸ್ಟಾರ್ಟ್​ ಪಂದ್ಯವನ್ನು ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಸಲಿದ್ದು, ಸನ್​ರೈಸರ್ಸ್​ ಹೈದರಾಬಾದ್ (RCB vs SRH)​ ವಿರುದ್ಧ ತನ್ನ ಮೊದಲ ಪಂದ್ಯವನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಈ ಒಂದು ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದು, ಯಾವ ತಂಡಕ್ಕೆ ರೋಚಕ ಹಾಗೂ ಶುಭಾರಂಭ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಂದು ಕಡೆ ಐಪಿಎಲ್​ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬ ಆತಂಕ ಕೆಲವರಲ್ಲಿ ಕಾಡಿದ್ದೇ ಆದರೂ ಇಂದಿನ ಕಿಕ್​ಸ್ಟಾರ್ಟ್​ ಮ್ಯಾಚ್​ಗೆ ವರುಣನ ತೊಂದರೆ ಇಲ್ಲ. ಮತ್ತೊಂದೆಡೆ, ದಾಖಲೆಗಳ ಸರದಾರ, ಆರ್​ಸಿಬಿಯ ರೂವಾರಿ, ಕಿಂಗ್ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ, ಅವರನ್ನು ಆರ್​ಸಿಬಿ ಜೆರ್ಸಿಯಲ್ಲಿ ತವರಿನಲ್ಲಿ ನೋಡು ತೀರ ಉತ್ಸುಕರಾಗಿದ್ದಾರೆ. ಈ ಪಂದ್ಯದ ಮೇಲೆ ಸಾಕಷ್ಟು ಲೆಕ್ಕಾಚಾರಗಳು ಮೂಡಿರುವುದು ಇದೀಗ ನೋಡುಗರ ಉತ್ಸಾಹವನ್ನು ದುಪ್ಪಟ್ಟಾಗಿಸಿದೆ.  

ಬ್ಯಾಟಿಂಗ್ ಬಲ

ರಜತ್ ಪಾಟೀದಾರ್​ ನಾಯಕತ್ವದಲ್ಲಿ ಎಸ್​ಆರ್​ಎಚ್​ ವಿರುದ್ಧ ಆಡಲಿರುವ ಆರ್​ಸಿಬಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್​ ಎರಡರ ಬಲಾಬಲ ಜೋರಾಗಿದೆ. ಮತ್ತೊಂದೆಡೆ, ಪ್ಯಾಟ್​ ಕಮ್ಮಿನ್ಸ್​ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಇಶಾನ್ ಕಿಶನ್​ ಮುನ್ನಡೆಸಲಿದ್ದಾರೆ. ಟಿ20 ಸ್ಪೆಷಲಿಸ್ಟ್​​ಗಳಾದ ಅಭಿಷೇಕ್ ಶರ್ಮ, ಕಿಶನ್​, ಟ್ರಾವಿಸ್​ ಹೆಡ್​, ಹೆನ್ರಿಚ್​ ಕ್ಲಾಸೆನ್​ರಂತಹ ಸ್ಪೋಟಕ ಬ್ಯಾಟರ್​ಗಳು ತಂಡದಲ್ಲಿದ್ದಾರೆ. ಇದೇ ಆರ್​ಸಿಬಿ ತಂಡದ ಮೇಲೆ ದಾಖಲೆಯನ್ನು ನಿರ್ಮಿಸಿದ್ದ ಎಸ್​ಆರ್​ಎಚ್​, ಇದೀಗ ಮತ್ತೊಮ್ಮೆ ಚಾಲೆಂಜರ್ಸ್​ ಮೇಲೆ ತನ್ನ ಹಿಂದಿನ ರೆಕಾರ್ಡ್​ ಮುರಿದು, ಹೊಸ ದಾಖಲೆ ನಿರ್ಮಿಸಲು ಎದುರುನೋಡುತ್ತಿದೆ.    

287ಕ್ಕೆ 3 ವಿಕೆಟ್​

ಏಪ್ರಿಲ್ 15, 2024ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 3 ವಿಕೆಟ್​ ನಷ್ಟಕ್ಕೆ 287 ರನ್​ ಬಾರಿಸಿದ ಸನ್‌ರೈಸರ್ಸ್ ಹೈದರಾಬಾದ್, ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ತಂಡದ ಮೊತ್ತದ ದಾಖಲೆಯನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ. ಈಗ ಮತ್ತೊಮ್ಮೆ ಆರ್​ಸಿಬಿ ಎದುರಿಗೆ ತನ್ನ ಮೊದಲ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾಗಿರುವ ಕಿಶನ್​ ಪಡೆ, ತಮ್ಮ ಬಲಿಷ್ಠ ಬ್ಯಾಟಿಂಗ್ ಲೈನ್​ಅಪ್​ ಬಳಸಿಕೊಂಡು ಬೆಂಗಳೂರು ಪಡೆಯ ವಿರುದ್ಧವೇ ತನ್ನ ಹಿಂದಿನ ದಾಖಲೆಯನ್ನು ಮುರಿಯಲು ಸಜ್ಜಾಗಿದೆ. ಇದು ಇಂದಿನ ಮೊದಲ ಪಂದ್ಯದಲ್ಲೇ ಸಾಧ್ಯವೇ? ಎಂಬ ಕುತೂಹಲ ಸದ್ಯ ಕ್ರಿಕೆಟ್​ ಪ್ರಿಯರಲ್ಲಿ ಕಾಡತೊಡಗಿದೆ,(ಏಜೆನ್ಸೀಸ್).  ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net