ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಅವರ ಡಕ್ಔಡ್ ದೊಡ್ಡ ಆಘಾತ ನೀಡಿತು. ಇದು ತಂಡದ ಗೆಲುವಿನ ಭರವಸೆಯನ್ನು ಕೊಂಚ ದೂರ ತಳ್ಳಿತು. ಅವರ ನಂತರದಲ್ಲಿ ಆಡಿದ ಜಾಕೆಬ್ ಬೆಥಲ್ (27), ದೇವದತ್ತ ಪಡಿಕ್ಕಲ್ (12), ರಜತ್ ಪಾಟೀದಾರ್ (8), ಜಿತೇಶ್ ಶರ್ಮ (18), ಟಿಮ್ ಡೇವಿಡ್ (0) ಅವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಈ ಮಧ್ಯೆ, ಕ್ರೀಸ್ಗೆ ಅಂಟಿ ನಿಂತ ಕೃನಾಲ್ ಪಾಂಡ್ಯ 73 ರನ್ಗಳನ್ನು ಬಾರಿಸುವ ಮೂಲಕ ನಡೆಸಿದ ಏಕಾಂಗಿ ಹೋರಾಟ ಕಡೆಗೂ ಫಲಿಸಿತು. ಆರ್ಸಿಬಿ ಎದುರು ಸೋತ ಬೆನ್ನಲ್ಲೇ ಮುಂಬೈ ಪ್ಲೇಆಫ್ ರೇಸ್ನಿಂದ ಮಾತ್ರವಲ್ಲ, ಲೀಗ್ನಿಂದಲೇ ಹೊರಬಿದ್ದಿದೆ. ಇದು ಎಂಐ ಅಭಿಮಾನಿಗಳನ್ನು ಭಾರೀ ನಿರಾಶೆಗೊಳಿಸಿದೆ.