ಪಡಿಕ್ಕಲ್ ಮಿಸ್ಟೇಕ್​,​ ಮಾರ್ಶ್​ ಶತಕದಾಟ! ರಜತ್ ಪಡೆಗೆ 213 ರನ್​ಗಳ ಗುರಿ | RCB vs LSG

RCB vs LSG ಪಂದ್ಯ
RCB vs LSG ಪಂದ್ಯ
Published on
RCB vs LSG: ಇಂದು (ಮೇ.07) ಏಕಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲಖನೌ ಸೂಪರ್​ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವಿನ ಪಂದ್ಯ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.

ಮಳೆಯಿಂದ 19ಕ್ಕೆ ಓವರ್​ಗೆ ಪಂದ್ಯ

ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿ ಬೌಲರ್​ಗಳು ಕಮಾಲ್​ ಮಾಡುವಲ್ಲಿ ಸಂಪೂರ್ಣ ಎಡವಿದರು. ಮಿಚೆಲ್​ ಮಾರ್ಶ್ ಅವರ​ (56 ಎಸೆತಗಳಲ್ಲಿ 111 ರನ್​, 9 ಬೌಂಡರಿ, 9 ಸಿಕ್ಸರ್​) ಸ್ಫೋಟಕ ಶತಕದಾಟ ತಂಡದ ಮೊತ್ತವನ್ನು 150ರ ಗಡಿದಾಟಿಸಲು ದೊಡ್ಡ ಕೊಡುಗೆ ನೀಡಿತು. ಉಳಿದಂತೆ, ಅರ್ಶಿನ್​ ಕುಲಕರ್ಣಿ (24 ಎಸೆತ, 17 ರನ್​), ರಿಷಭ್ ಪಂತ್​ (32 ರನ್​), ನಿಕೋಲಸ್​ ಪೂರನ್​ (38 ರನ್​) ಅವರ ಸಹಾಯದಿಂದ ತಂಡವು 3 ವಿಕೆಟ್​ ನಷ್ಟಕ್ಕೆ 209 ರನ್​ಗಳನ್ನು ಕಲೆಹಾಕಿತು. ಇದರಲ್ಲಿ ಮಳೆ ಬಂದ ಕಾರಣ, DLS ನಿಯಮ​ ಬಳಸಿ 213 ರನ್​ಗಳನ್ನು ಟಾರ್ಗೆಟ್​ ಆಗಿ ನೀಡಲಾಗಿದೆ.

ಕ್ಯಾಚ್​ಗಳು ಡ್ರಾಪ್​

ಇನ್ನು ಬೌಲಿಂಗ್​ ವಿಭಾಗದಲ್ಲಿ ಆರ್​ಸಿಬಿ ಪರ ಜೋಶ್​ ಹೇಜಲ್​ವುಡ್​ ಮತ್ತು ಕೃನಾಲ್​ ಪಾಂಡ್ಯ ತಲಾ ಒಂದು ವಿಕೆಟ್​ ಪಡೆದಿದ್ದು ಬಿಟ್ಟರೆ ಭುವನೇಶ್ವರ್​ ಕುಮಾರ್​, ರೊಮಾರಿಯೊ ಶೆಫರ್ಡ್​, ಸುಯಾಶ್​ ಶರ್ಮರಂತಹ ಬೌಲರ್​ಗಳಿಂದ ಕಮಾಲ್​ ಪ್ರದರ್ಶನ ಬರಲಿಲ್ಲ. ಇದರೊಟ್ಟಿಗೆ ಹಲವು ಕ್ಯಾಚ್​ಗಳನ್ನು ಕೈಬಿಟ್ಟಿದ್ದು, ಎಲ್​ಎಸ್​ಜಿ ಬ್ಯಾಟರ್​ಗಳ ರನ್ ಮಳೆಗೆ ಕಾರಣವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net