ಜನ್ಮದಿನ, ಆಕರ್ಷಕ ಅರ್ಧಶತಕ... ತವರಿನಲ್ಲಿ ಕನ್ನಡಿಗ, ಸ್ಟಬ್ಸ್, ಮಿಲ್ಲರ್​ ಆಟಕ್ಕೆ ಸೋತು ಸುಣ್ಣವಾದ ಆರ್​ಸಿಬಿ | RCB vs DC

RCB vs DC ಪಂದ್ಯ
RCB vs DC ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ
  • ಆರ್​ಸಿಬಿ ನೀಡಿದ 175 ರನ್​ ರಜತ್​ ಪಡೆ
  • ಕೊನೆ ಓವರ್​ನ ಮೂರು ಬಾಲ್​ಗಳಲ್ಲಿ ರೋಚಕ ಗೆಲುವು
RCB vs DC: ಇಂದು (ಏ.18) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್​ 19ನೇ ಆವೃತ್ತಿಯ ಪಂದ್ಯದಲ್ಲಿ ಡಿಸಿ ರೋಚಕ ಗೆಲುವು ಸಾಧಿಸಿತು.
ಟಾಸ್​ ಗೆದ್ದ ಅಕ್ಷರ್​ ಪಟೇಲ್​, ಆರ್​ಸಿಬಿಗೆ ಮೊದಲು ಬ್ಯಾಟ್​ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ ಕಳೆದುಕೊಂಡ ರಜತ್ ಪಾಟಿದಾರ್​ ಪಡೆ 175 ರನ್​ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಫಿಲ್​ ಸಾಲ್ಟ್​ (63 ರನ್​, 38 ಎಸೆತ) ಉತ್ತಮ ಓಪನಿಂಗ್ ಪ್ರದರ್ಶನ ನೀಡಿದರು. ಆದರೆ, ವಿರಾಟ್​ ಕೊಹ್ಲಿ ಮಾತ್ರ ಕಿಕ್ಕಿರಿದ್ದು ಸೇರಿದ್ದ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದರು. ಅವರ ಬಳಿಕ ಯಾವೊಬ್ಬ ಬ್ಯಾಟರ್​ನಿಂದಲೂ ಉತ್ತಮ ಇನ್ನಿಂಗ್ಸ್ ಬರಲಿಲ್ಲ.
ಆರ್​ಸಿಬಿ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಪಡೆಗೆ ಆರಂಭಿಕ ಹಂತದಲ್ಲೇ ಪಥಮ್​ ನಿಸ್ಸಂಕಾ (1 ರನ್​) ಅವರ ವಿಕೆಟ್​ ಆಘಾತ ನೀಡಿದರೂ ಕನ್ನಡಿಗ ಕೆ.ಎಲ್​. ರಾಹುಲ್ (57 ರನ್​, 34 ಎಸೆತ)​ ಅವರಿಂದ ಬಂದ ಉತ್ತಮ ಇನ್ನಿಂಗ್ಸ್ ಗೆಲುವಿನ ಭರವಸೆಯನ್ನು ನೀಡಿತು. ಪವರ್​ಪ್ಲೇಯಲ್ಲಿ ಹೆಚ್ಚುವರಿ ರನ್​ಗಳನ್ನು ಕಲೆಹಾಕದಿದ್ದರೂ ನಂತರದಲ್ಲಿ ಸ್ಟಬ್ಸ್ (ಅಜೇಯ 60 ರನ್​​ 47 ಎಸೆತ), ಕ್ಯಾಪ್ಟನ್ ಅಕ್ಷರ್​ ಪಟೇಲ್ (26 ರನ್​, 19 ಎಸೆತ)​ ಮತ್ತು ಸಿಕ್ಸರ್​ಗಳನ್ನು ಬಾರಿಸಿದ ಡೇವಿಡ್​ ಮಿಲ್ಲರ್​​ ಅವರ ಅಮೋಘ ಪ್ರದರ್ಶನ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net