ಕಳೆದ ಸೀಸನ್ನಲ್ಲಿ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, ಅತ್ಯಧಿಕ ವಿಕೆಟ್ಗಳನ್ನು ಪಡೆದು ಮಿಂಚಿದ ಸ್ಟಾರ್ ವೇಗಿ ಜೋಶ್ ಹೇಜಲ್ವುಡ್, ಇಂಜುರಿಯಿಂದ ಇನ್ನೂ ಸಂಪೂರ್ಣವಾಗಿ ಗುಣಮುಖ ಆಗಿಲ್ಲ ಎಂದು ವರದಿಯಾಗಿದೆ. 18ನೇ ಆವೃತ್ತಿಯಲ್ಲಿ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜೋಶ್, ಆಡಿದ 12 ಪಂದ್ಯಗಳಲ್ಲಿ 22 ವಿಕೆಟ್ಗಳನ್ನು ಕಬಳಿಸಿ, ಫ್ರಾಂಚೈಸಿ ಚೊಚ್ಚಲ ಟ್ರೋಫಿ ಗೆಲ್ಲಲು ದೊಡ್ಡ ಮಟ್ಟದ ಕೊಡುಗೆ ನೀಡಿದರು. ಅಂತೆಯೇ, ಈ ಸೀಸನ್ನಲ್ಲಿಯೂ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದ ತಂಡಕ್ಕೆ ಅವರ ಅನುಪಸ್ಥಿತಿ ಎದುರಾಗಿದೆ.