ವರದಿಗಳ ಪ್ರಕಾರ, ಸ್ವೀಡನ್ನ ಖಾಸಗಿ ಷೇರು ಸಂಸ್ಥೆ "ಇಕ್ಯೂಟಿ' ಆರ್ಸಿಬಿ ತಂಡದ ಖರೀದಿ ರೇಸ್ನಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಇಕ್ಯೂಟಿ 2ರಿಂದ 2.1 ಶತಕೋಟಿ ಡಾಲರ್ (ಸುಮಾರು 18,463ರಿಂದ 19,386 ಕೋಟಿ ರೂ.) ಬಿಡ್ ಸಲ್ಲಿಸಿದೆ ಎನ್ನಲಾಗಿದೆ. ಇನ್ನು ಮಣಿಪಾಲ್ ಹಾಸ್ಪಿಟಲ್ಸ್ನ ಡಾ. ರಂಜನ್ ಪೈ ಅವರು ಅಮೆರಿಕದ ಖಾಸಗಿ ಷೇರು ಸಂಸ್ಥೆ ಕೆಕೆಆರ್ ಮತ್ತು ಸಿಂಗಾಪುರದ ಪ್ರಮುಖ ಹೂಡಿಕೆ ಸಂಸ್ಥೆ ಟೆಮಾಸೆಕ್ ಜತೆಗೂಡಿ ಆರ್ಸಿಬಿ ಖರೀದಿ ರೇಸ್ನಲ್ಲಿ ಉಳಿದಿದ್ದಾರೆ. ಆದರೆ ಅವರ ಬಿಡ್ ಮೊತ್ತ ಬಹಿರಂಗವಾಗಿಲ್ಲ.