ಬ್ರಾಂಡ್ ಮೌಲ್ಯದಲ್ಲೂ ಆರ್‌ಸಿಬಿ ಕಿಂಗ್: ಐಪಿಎಲ್‌ನ ಮೌಲ್ಯ ₹1.97 ಲಕ್ಷ ಕೋಟಿಗೆ ಏರಿಕೆ!

ಬ್ರಾಂಡ್ ಮೌಲ್ಯದಲ್ಲೂ ಆರ್‌ಸಿಬಿ ಕಿಂಗ್:  ಐಪಿಎಲ್‌ನ ಮೌಲ್ಯ ₹1.97 ಲಕ್ಷ ಕೋಟಿಗೆ ಏರಿಕೆ!
ಬ್ರಾಂಡ್ ಮೌಲ್ಯದಲ್ಲೂ ಆರ್‌ಸಿಬಿ ಕಿಂಗ್: ಐಪಿಎಲ್‌ನ ಮೌಲ್ಯ ₹1.97 ಲಕ್ಷ ಕೋಟಿಗೆ ಏರಿಕೆ!
Published on
ನವದೆಹಲಿ: ಸತತ ಎರಡು ಬಾರಿ ಟ್ರೋಫಿ ಗೆದ್ದ ಸಾಧನೆಯೊಂದಿಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಅರ್‌ಸಿಬಿ) ತಂಡ ಐಪಿಎಲ್ ಟೂರ್ನಿಯ ಅತ್ಯಂತ ಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ಎಂಬ ಹೆಗ್ಗಳಿಕೆಯೂ ತನ್ನದಾಗಿಸಿಕೊಂಡಿದೆ. ಸತತ ಎರಡನೇ ವರ್ಷ ಅಗ್ರಸ್ಥಾನ ಕಾಯ್ದುಕೊಂಡಿರುವ ಆರ್‌ಸಬಿ ತಂಡದ ಮೌಲ್ಯವೂ ಕಳೆದ ವರ್ಷಕ್ಕಿಂತ ಶೇ.16 ಏರಿಕೆ ಕಂಡಿದ್ದು, 2,983 ಕೋಟಿ ರೂ.ಗೆ (ಯುಎಸ್‌ಡಿ 312 ಮಿಲಿಯನ್)ತಲುಪಿದೆ. ಸತತ ಎರಡನೇ ವರ್ಷವೂ ಐಪಿಎಲ್‌ನ ವ್ಯವಹಾರ ಮೌಲ್ಯವೂ ಎರಡಂಕಿ ದಾಟಿದ್ದು, ಶೇ.11.4 ಏರಿಕೆ ಕಂಡಿದೆ.
ಐಪಿಎಲ್ ಟೂರ್ನಿಯ ಬ್ರಾಂಡ್ ಮೌಲ್ಯವೂ 1.97 ಲಕ್ಷ ಕೋಟಿ ರೂಪಾಯಿ (20.6 ಬಿಲಿಯನ್) ಮುಟ್ಟಿದೆ.
ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ನಡೆಸಿರುವ ಐಪಿಎಲ್ ಬ್ರಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಐಪಿಎಲ್ ಜಗತ್ತಿನ ಎರಡನೇ ಅತ್ಯಂತ ಮೌಲ್ಯಯುತ ಟೂರ್ನಿಗಳಲ್ಲಿ ಒಂದಾಗಿದೆ. ಲೀಗ್‌ನ ಸ್ವತಂತ್ರ ಬ್ರಾಂಡ್ ಮೌಲ್ಯವೂ ಶೇ.10.3 ಏರಿಕೆಯಾಗಿದೆ. ಅಂದರೆ, ₹41,106 ಕೋಟಿಗೆ ಹೆಚ್ಚಳ ಕಂಡಿದೆ.
ಆರ್‌ಸಿಬಿ ಹಾಗೂ ರಾಜಸ್ಥಾನ ತಂಡಗಳ ಮಾಲೀಕತ್ವದ ಬದಲಾವಣೆಯೊಂದಿಗೆ ಐಪಿಎಲ್ ಟೂರ್ನಿ ಮೌಲ್ಯದ ಏರಿಕೆ ಪೂರಕವಾಗಿದೆ ಎನ್ನಲಾಗಿದೆ. ಫ್ರಾಂಚೈಸಿಯ ಮಾಲೀಕತ್ವದ ವರ್ಗಾವಣೆಯ ನಡುವೆಯೂ ಆರ್‌ಸಿಬಿ ತಂಡದ ಮೌಲ್ಯವೂ ₹2,307 ಕೋಟಿ ಯಿಂದ ₹2,983 ಕೋಟಿಗೆ ಏರಿಕೆ ಆಗಿದ್ದು, ಐಪಿಎಲ್‌ನ 10 ಫ್ರಾಂಚೈಸಿಗಳಲ್ಲಿ ನಂಬರ್ ಒನ್ ಎನಿಸಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (₹2,526 ಕೋಟಿ) ಶೇ.9.1 ಏರಿಕೆಯೊಂದಿಗೆ ಎರಡನೇ ಸ್ಥಾನ ಪಡೆದರೆ, ಶೇ.7.9 ಪ್ರಗತಿ ಸಾಧಿಸಿರುವ ಎರಡು ಬಾರಿಯ ಚಾಂಪಿಯನ್ ಕೆಕೆಆರ್ (₹2,342 ಕೋಟಿ)ತಂಡ, ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ (₹2,333 ಕೋಟಿ) ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಶೇ.3.8 ಮೌಲ್ಯ ಏರಿಕೆ ನಡುವೆಯೂ ಸಿಎಸ್‌ಕೆ 4ನೇ ಸ್ಥಾನದಲ್ಲಿದೆ.
ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ
ಆರ್‌ಸಿಬಿ: ₹2,983 ಕೋಟಿ
ಮುಂಬೈ: ₹2,524 ಕೋಟಿ
ಕೆಕೆಆರ್: ₹2,342 ಕೋಟಿ
ಸಿಎಸ್‌ಕೆ: ₹2,333 ಕೋಟಿ
ಸನ್‌ರೈಸರ್ಸ್‌: ₹1,607 ಕೋಟಿ
ರಾಜಸ್ಥಾನ: ₹1,540 ಕೋಟಿ
ಪಂಜಾಬ್: ₹1,510 ಕೋಟಿ
ಗುಜರಾತ್: ₹1,503 ಕೋಟಿ
ಡೆಲ್ಲಿ: ₹1,492 ಕೋಟಿ
ಲಖನೌ: ₹1,168 ಕೋಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net