ನಥಿಂಗ್​​ನ ಬೆಂಗಳೂರು ಮಳಿಗೆಗೆ ಆರ್‌ಸಿಬಿ ಆಟಗಾರರ ಭೇಟಿ: ಫ್ಯಾನ್​​ ಜತೆ ಸಂವಹನ ನಡೆಸಿದ ಭುವಿ, ಹೇಜಲ್‌ವುಡ್, ಶೆಫರ್ಡ್, ಬೆಥೆಲ್! RCB

Published on
ಬೆಂಗಳೂರು: ಪ್ರಸಕ್ತ 2026ರ ಟಿ20 ಕ್ರಿಕೆಟ್ ಸರಣಿಗೆ ಆರ್‌ಸಿಬಿ ತಂಡದ ಟೈಟಲ್ ಸ್ಪಾನ್ಸರ್ ಆಗಿರುವ ಲಂಡನ್ ಮೂಲದ ತಂತ್ರಜ್ಞಾನ ಸಂಸ್ಥೆ ನಥಿಂಗ್​ನ ಬೆಂಗಳೂರು ಮಳಿಗೆಗೆ ಈ ಪಾಲುದಾರಿಕೆಯ ಭಾಗವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಪ್ರಮುಖ ಆಟಗಾರರು ಭೇಟಿ ನೀಡಿದರು.
ತಂಡದ ವೇಗಿಗಳಾದ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಹಾಗೂ ರೊಮಾರಿಯೋ ಶೆಫರ್ಡ್ ಮತ್ತು ಜೇಕಬ್ ಬೆಥೆಲ್ ಮಳಿಗೆಗೆ ಆಗಮಿಸಿದ್ದು, ಆ ಸಂದರ್ಭದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಆಟಗಾರರು ಮಳಿಗೆಯಲ್ಲಿದ್ದ ಗ್ಯಾಜೆಟ್‌ ಗಳನ್ನು ವೀಕ್ಷಿಸಿದರಲ್ಲದೆ, ಗ್ರಾಹಕರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.
ಭೇಟಿಯ ನೆನಪಿಗಾಗಿ ಮಳಿಗೆಯ ಗಾಜಿನ ಕಿಟಕಿಯ ಮೇಲೆ ಗ್ರಾಫಿಟಿ ಶೈಲಿಯಲ್ಲಿ “RCB was here” ಎಂದು ಬರೆಯುವ ಮೂಲಕ ತಂಡದ ಉಪಸ್ಥಿತಿಯನ್ನು ದಾಖಲಿಸಿದರು.
ಕೌಂಟರ್‌ಪಾಯಿಂಟ್ ರಿಸರ್ಚ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತೀಯ ಸ್ಮಾರ್ಟ್‌ ಫೋನ್ ಮಾರುಕಟ್ಟೆಯಲ್ಲಿ ನಥಿಂಗ್ ಅತಿ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ.
2026ರ ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆಯು ವಾರ್ಷಿಕವಾಗಿ ಶೇ. 47 ರಷ್ಟು ಪ್ರಗತಿ ಸಾಧಿಸಿದ್ದು, ದಾಖಲೆಯ ಬೆಳವಣಿಗೆ ಕಂಡಿದೆ. ಕಳೆದ ಒಂಬತ್ತು ತ್ರೈಮಾಸಿಕಗಳ ಪೈಕಿ ಎಂಟರಲ್ಲಿ ಈ ಬ್ರಾಂಡ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತದಲ್ಲಿ ತನ್ನ ಮೊದಲ ಎಕ್ಸ್‌ ಕ್ಲೂಸಿವ್ ರಿಟೇಲ್ ಸ್ಟೋರ್ ಆರಂಭಿಸಿರುವುದು ಮತ್ತು ಆಫ್‌ ಲೈನ್ ಮಾರುಕಟ್ಟೆಗೆ ಆದ್ಯತೆ ನೀಡುತ್ತಿರುವುದು ಈ ಯಶಸ್ಸಿಗೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net