"ನನ್ನ ಗಂಡ ಕ್ರಿಕೆಟ್ ಆಡುವ ಸಲುವಾಗಿ ಲಂಡನ್, ದುಬೈ, ಆಸ್ಟ್ರೆಲಿಯಾ ಮುಂತಾದೆಡೆಗಳಿಗೆ ಹೋಗುತ್ತಿರುತ್ತಾರೆ. ವಿವಿಧ ವಾತಾವರಣಗಳಿಗೆ ಹೋದರೂ ಅವರಿಗೆ ಯಾವುದೇ ರೀತಿಯ ದುರಾಭ್ಯಾಸ ಅಥವಾ ದುರ್ಗುಣಗಳಿಲ್ಲ (vices). ಆದರೆ ತಂಡದ ಇತರ ಕೆಲ ಆಟಗಾರರು ವ್ಯಸನ ಮತ್ತು ದುಶ್ಚಟಗಳನ್ನು ಹೊಂದಿದ್ದಾರೆ. ನನ್ನ ಗಂಡನೂ ಅದೇ ರೀತಿ ಮಾಡಬಹುದಾಗಿತ್ತು. 12ನೇ ವಯಸ್ಸಿನಿಂದಲೇ ಅವರು ನಿರಂತರವಾಗಿ ಮನೆಯಿಂದ ಹೊರಗಿದ್ದಾರೆ ಮತ್ತು ಅವರು ಏನು ಬೇಕಾದರೂ ಮಾಡಬಹುದಾಗಿತ್ತು. ಆದರೆ ಅವರಿಗೆ ತಮ್ಮ ನೈತಿಕ ಕರ್ತವ್ಯ ಮತ್ತು ಜವಾಬ್ದಾರಿಯ ಬಗ್ಗೆ ಅರಿವು ಇದೆ' ಎಂದು ಗುಜರಾತ್ ಸರ್ಕಾರದ ಶಿಕ್ಷಣ ಸಚಿವೆಯೂ ಆಗಿರುವ ರಿವಾಬಾ, ರಾಜಕೀಯ ಸಮಾರಂಭವೊಂದರ ಭಾಷಣದಲ್ಲಿ ವಿವರಿಸಿದ್ದಾರೆ.