Ravindra Jadeja : ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್. ಧೋನಿ, ರವೀಂದ್ರ ಜಡೇಜಾ ಹಾಗೂ ಸುರೇಶ್ ರೈನಾ ಒಂದು ಕಾಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರ ಸ್ತಂಭಗಳಾಗಿದ್ದರು ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ರೈನಾ ಅವರು ತಮ್ಮ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿ ತುಂಬಾ ವರ್ಷಗಳೇ ಕಳೆದಿವೆ. ಉಳಿದಂತೆ ಧೋನಿ ಮತ್ತು ಜಡೇಜಾ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಧೋನಿ ಇನ್ನೂ ಸಿಎಸ್ಕೆಯಲ್ಲೇ ಇದಾರೆ. ಆದರೆ, ಕಳೆದ 12 ವರ್ಷಗಳಿಂದ ಸಿಎಸ್ಕೆ ತಂಡದ ಅವಿಭಾಜ್ಯ ಅಂಗವಾಗಿದ್ದ ರವೀಂದ್ರ ಜಡೇಜಾ, ಈ ವರ್ಷ ತಮ್ಮ ಹಳೆಯ ತಂಡ ರಾಜಸ್ಥಾನ ರಾಯಲ್ಸ್ (ಆರ್ಆರ್) ಪರ ಮತ್ತೆ ಕಣಕ್ಕೆ ಇಳಿದಿದ್ದಾರೆ. ಇದು ಸಿಎಸ್ಕೆ ಅಭಿಮಾನಿಗಳಲ್ಲಿ ಕೊಂಚ ಭಾವುಕ ಸನ್ನಿವೇಶಕ್ಕೆ ಕಾರಣವಾಗಿದೆ.