ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ವಿಶಿಷ್ಠ ಸಾಧನೆ ಮಾಡಿದ ರವೀಂದ್ರ ಜಡೇಜಾ!: ಪಂತ್‌ಗೆ ಇಂಜುರಿ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ವಿಶಿಷ್ಠ ಸಾಧನೆ ಮಾಡಿದ ರವೀಂದ್ರ ಜಡೇಜಾ!: ಪಂತ್‌ಗೆ ಇಂಜುರಿ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ವಿಶಿಷ್ಠ ಸಾಧನೆ ಮಾಡಿದ ರವೀಂದ್ರ ಜಡೇಜಾ!: ಪಂತ್‌ಗೆ ಇಂಜುರಿ
Published on

ಕೊಲಂಬೊ: ಕನ್ನಡಿಗ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (117 ರನ್, 193 ಎಸೆತ, 12 ಬೌಂಡರಿ) ಸತತ ಎರಡನೇ ಶತಕದ ನೆರವಿನಿಂದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಭಾಗವಾಗಿರುವ ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲ ದಿನದ ಗೌರವ ಸಂಪಾದಿಸಿದ್ದು, ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆ ಮೂಡಿಸಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಶುಭಮಾನ್ ಗಿಲ್ ಬಳಗ 1-0 ಮುನ್ನಡೆಯಲ್ಲಿದ್ದು, 3 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಸರಣಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಉತ್ತಮ ಆರಂಭವನ್ನೇ ಕಂಡಿದೆ.

ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಶುಭಮಾನ್ ಗಿಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 26 ವರ್ಷದ ದೇವದತ್ ಪಡಿಕ್ಕಲ್ ಹಾಗೂ ನಾಯಕ ಶುಭಮಾನ್ ಗಿಲ್ (50 ರನ್, 108 ಎಸೆತ, 6 ಬೌಂಡರಿ) ಶತಕದ ಜತೆಯಾಟದ ನೆರವಿನಿಂದ ಭಾರತ ದಿನದಂತ್ಯಕ್ಕೆ 85 ಓವರ್‌ಗಳಲ್ಲಿ 5 ವಿಕೆಟ್‌ಗೆ ಭರ್ತಿ 300 ರನ್ ಕಲೆಹಾಕಿದೆ. ಬ್ಯಾಟರ್ ಧ್ರುವ ಜುರೆಲ್ (7*) ಜತೆಗೆ, ಪದಾರ್ಪಣೆ ಪಂದ್ಯವನ್ನಾಡುತ್ತಿರುವ ಸಾರಾಂಶ್ ಜೈನ್ (4*) ಮುರಿಯದ 6ನೇ ವಿಕೆಟ್‌ಗೆ 5 ಎಸೆತಗಳಲ್ಲಿ 4 ರನ್‌ಗಳಿಸಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

50. ರವೀಂದ್ರ ಜಡೇಜಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲುೃಟಿಸಿ) 50 ಪಂದ್ಯಗಳನ್ನಾಡಿದ ಮೊದಲ ಭಾರತೀಯ ಕ್ರಿಕೆಟರ್. ಮೊ.ಸಿರಾಜ್ (47), ವಿರಾಟ್ ಕೊಹ್ಲಿ (46) ಕ್ರಮವಾಗಿ ನಂತರದ ಎರಡು ಸ್ಥಾನದಲ್ಲಿದ್ದಾರೆ.


ವಿಕೆಟ್ ಕೀಪರ್-ಬ್ಯಾಟರ್ ರಿಷಭ್

ಪಂತ್‌ಗೆ ಇಂಜುರಿ
ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (3*) ಇನಿಂಗ್ಸ್‌ನ 58ನೇ ಓವರ್‌ನಲ್ಲಿ ಲಹಿರು ಕುಮಾರ ಎಸೆದ ಶಾರ್ಟ್‌ಬಾಲ್ ಅನ್ನು ಫುಲ್ ಮಾಡಲೆತ್ನಿಸಿ ಎಡ ಮಣಿಕಟ್ಟಿಗೆ ಪೆಟ್ಟು ಮಾಡಿಕೊಂಡರು. ತಕ್ಷಣವೇ ಮೈದಾನದಲ್ಲಿ ತುರ್ತು ಚಿಕಿತ್ಸೆ ಪಡೆದರೂ, ನೋವು ತೀವ್ರವಾಗಿದ್ದರಿಂದ ರಿಟೈರ್ಡ್ ಹರ್ಟ್ ಆಗಿ ಹೊರನಡೆದರು. ಅವರ ಬದಲಿಗೆ ರವೀಂದ್ರ ಜಡೇಜಾ ಕ್ರೀಸ್‌ಗೆ ಆಗಮಿಸಿದರು. ‘ಪಂತ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಎರಡನೇ ದಿನ ಬ್ಯಾಟಿಂಗ್‌ಗೆ ಆಗಮಿಸಲಿದ್ದಾರೆ’ ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ದಿನದಾಟದ ನಂತರ ಮಾಹಿತಿ ಹಂಚಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net