ಆತ ಕೋಪಿಷ್ಠ, ದುರಂಹಕಾರಿ! ಆದ್ರೆ... ಕೊಹ್ಲಿ​ ವಿರೋಧಿಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ರವಿಶಾಸ್ತ್ರಿ!

ವಿರಾಟ್​ ಕೊಹ್ಲಿ, ರವಿಶಾಸ್ತ್ರಿ
ವಿರಾಟ್​ ಕೊಹ್ಲಿ, ರವಿಶಾಸ್ತ್ರಿ
Published on

ಪ್ರಮುಖ ಮುಖ್ಯಾಂಶಗಳು

  • ವಿರಾಟ್​ ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟಿಗ, ಕೋಚ್​ ರವಿಶಾಸ್ತ್ರಿ ಹೇಳಿಕೆ
  • ಕೊಹ್ಲಿ ಒಬ್ಬ ಕೋಪಿಷ್ಠ, ದುರಂಹಕಾರಿ ನಿಜ! ಆದ್ರೆ...
Virat Kohli: ಟೀಮ್​ ಇಂಡಿಯಾದ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ, ದಾಖಲೆಗಳ ಸರದಾರ, 'ರನ್​ಮಷಿನ್​', ಅಭಿಮಾನಿಗಳ ನೆಚ್ಚಿನ 'ಕಿಂಗ್'​ ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು, ಊಹಾಪೋಹಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ. ಅಪಾರ ಸಂಖ್ಯೆಯಲ್ಲಿ ಕೊಹ್ಲಿಯನ್ನು ಪ್ರೀತಿಸುವವರ ಮಧ್ಯೆ ಒಂದಷ್ಟು ಮಂದಿ ವಿರಾಟ್​ ಕಂಡರೆ ಸಾಕು ಉರಿದುಬೀಳುತ್ತಾರೆ. ಅಂತವರಿಗೆ ಮಾಜಿ ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ಮುಟ್ಟಿ ನೋಡಿಕೊಳ್ಳುವಂತೆ ಹೇಳಿಕೆಯೊಂದನ್ನು ನೀಡಿದ್ದಾರೆ.
ವಿರಾಟ್​ ಕೊಹ್ಲಿ ಅವರ ದಾಖಲೆಗಳು ಇಡೀ ಕ್ರಿಕೆಟ್​ ಜಗತ್ತಿಗೆ ಗೊತ್ತಿದೆ. ಇತ್ತೀಚೆಗಷ್ಟೇ, ಸತತ ಎರಡನೇ ಬಾರಿ ಆರ್​ಸಿಬಿಗೆ ಐಪಿಎಲ್​ ಟ್ರೋಫಿ ಗೆದ್ದು ಕೊಡುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು. ಎಂದಿನಂತೆ ತಮ್ಮ ಆಟದ ವೈಖರಿ, ಎದುರಾಳಿಗಳನ್ನು ಮೈದಾನದಲ್ಲಿ ಕೆರಳಿಸುವ ವಿರಾಟ್​ ನಡೆಗೆ ಸಾಕಷ್ಟು ಅಭಿಮಾನಿಗಳು ಸಾಥ್​ ನೀಡಿದರೆ, ಇನ್ನೂ ಒಂದಷ್ಟು ಕ್ರಿಕೆಟ್​ ಫ್ಯಾನ್ಸ್​, ಇದಕ್ಕೆ ಆಕ್ಷೇಪಣೆ ಹೊರಹಾಕುತ್ತಾರೆ. ಕೊಹ್ಲಿಗೆ ಸಿಕ್ಕಾಪಟ್ಟೆ ಸಿಟ್ಟು, ಎದುರಾಳಿ ತಂಡದ ವಿರುದ್ಧ ಅಷ್ಟೊಂದು ಕೋಪ ಏಕೆ? ಅವರ ಎದುರೇ ಹೋಗಿ ಉರಿಸುವಂತ ಶೈಲಿ ಒಪ್ಪಿಕೊಳ್ಳಲಾಗುವುದು ಎಂದೆಲ್ಲ ಆಗಾಗ್ಗೆ ಟೀಕೆ ಮಾಡುತ್ತಿರುತ್ತಾರೆ. ಈ ಮಾತುಗಳಿಗೆ ರವಿಶಾಸ್ತ್ರಿ ಅವರು ಖಡಕ್​ ಉತ್ತರ ನೀಡಿರುವುದು ಸದ್ಯ ಕೊಹ್ಲಿ ಅಭಿಮಾನಿಗಳ ಮನ ತಣಿಸಿದೆ.
'ಒನ್8' ಯೂಟ್ಯೂಬ್‌ ಚಾನೆಲ್​ನಲ್ಲಿ ಮಾತನಾಡಿರುವ ರವಿಶಾಸ್ತ್ರಿ, "ಕೊಹ್ಲಿ ಒಬ್ಬ ದುರಹಂಕಾರಿ ಮತ್ತು ಕೋಪಿಷ್ಠ ಎಂಬ ಮಾತುಗಳು ನಿಜವೇ ಇರಬಹುದು. ಆದರೆ, ಅದು ಕ್ರಿಕೆಟ್ ಮೈದಾನಕ್ಕಷ್ಟೇ ಸೀಮಿತ. ಅಲ್ಲಿಂದ ಹೊರಗೆ ಮುಂದುವರೆಯುವುದಿಲ್ಲ. ಮೈದಾನದ ಹೊರಗೆ ಹೋಗುತ್ತಿದ್ದಂತೆ ಅವರು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿ. ಅದೇನಿದ್ದರೂ ಮ್ಯಾಚ್​ ಸಮಯದಲ್ಲಿ ಆ ರೀತಿಯ ಆಟವನ್ನಾಡುತ್ತಾರೆ ಅಷ್ಟೇ. ಬದಲಾವಣೆಯ ಗುಣ ಎಲ್ಲಿರಿಗೂ ಬರೋದಿಲ್ಲ. ಇದು ಕೊಹ್ಲಿಯಲ್ಲಿ ನನಗಿಷ್ಟ" ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net